ರಾಷ್ಟ್ರೀಯ

ರಾಹುಲ್ ಗಾಂಧಿ ತಿರುಚಿದ ವೀಡಿಯೋ: ತೆಗೆಯದಿದ್ದರೆ ಕೋರ್ಟಿಗೆ ಹೋಗುವೆ ಎಂದ ಲೇಖಕ

Pinterest LinkedIn Tumblr


ಹೊಸದಿಲ್ಲಿ: ಸಿಂಗಾಪುರದಲ್ಲಿ ನಡೆದ ಸಂವಾದ ಈಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ವಿವಾದದ ಸುಳಿಗೆ ಸಿಲುಕಿಸಿದೆ.

ಸಿಂಗಾಪುರದಲ್ಲಿ ನಡೆದ ಸಂವಾದದ ವಿಡಿಯೋವನ್ನು ಕಾಂಗ್ರೆಸ್‌ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಪ್ರಸನ್‌ಜೀತ್‌ ಬಸು ಅವರು ಈಗ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಕೂಡಲೇ ಡಿಲೀಟ್‌ ಮಾಡದಿದ್ದರೆ ಸಿಂಗಾಪುರದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ನಿಮ್ಮ ರಾಜಕೀಯ ನಾಯಕನನ್ನು ವಿವಿಧ ರೀತಿಯಲ್ಲಿ ಪ್ರಸ್ತುತಪಡಿಸುವುದಕ್ಕಾಗಿ ನಕಲಿ ವಿಡಿಯೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದು ತಪ್ಪು ಎಂದು ಬಸು ಟ್ವೀಟಿಸಿದ್ದಾರೆ.

ನಾಲ್ಕೈದು ವಿವಿಧ ವೀಡಿಯೋ ದೃಶ್ಯಗಳನ್ನು ಎಡಿಟ್‌ ಮಾಡಿ ಕಾಂಗ್ರೆಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

Comments are closed.