ರಾಷ್ಟ್ರೀಯ

‘ಹಿಲ್ಸಾ’ ಮೀನಿನ ರುಚಿ ಸವಿಯಲು ಶಾಸಕರ ಕ್ಯೂ!

Pinterest LinkedIn Tumblr

1
ಕೋಲ್ಕತ್ತಾ: ಸಾಮಾನ್ಯವಾಗಿ ತಮ್ಮ ಕೆಲಸ ಕಾರ್ಯಗಳಿಗಳಿಗಾಗಿ ಜನ ಸಾಮಾನ್ಯರು ಶಾಸಕರ ಭೇಟಿಗಾಗಿ ಮುಗಿಬೀಳುವುದು ಸಾಮಾನ್ಯ. ಆದರೆ ತೀರಾ ವಿಭಿನ್ನವಾದ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳದ ಶಾಸಕರೇ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ.

ವಿಷಯ ಏನೆಂದರೆ ಸ್ವಾದಿಷ್ಟವಾದ ‘ಹಿಲ್ಸಾ’ ಮೀನಿನ ರುಚಿ ಸವಿಯಲು ಶಾಸಕರು ಸರದಿ ಸಾಲಲ್ಲಿ ನಿಂತಿದ್ದರು. ಅಂದ ಹಾಗೆ ಮೀನುಗಾರಿಕಾ ಇಲಾಖೆಯು ಶಾಸಕರಿಗೆ ಹಿಲ್ಸಾ ಮೀನುಗಳನ್ನು ಒದಗಿಸಿತ್ತು.

ಮಾರುಕಟ್ಟೆಯಲ್ಲಿ ಹಿಲ್ಸಾ ಮೀನುಗಳು ಪ್ರತಿ ಕೆ.ಜಿ.ಗೆ 1200 ರೂ.ಗಳಿಂದ 1400 ರೂ.ಗಳಷ್ಟು ಬೆಲೆ ಬಾಳುತ್ತದೆ. ಇದರ ಜತೆಗೆ ಸಹಾಯಕ ಸಿಬ್ಬಂದಿಗಳಿಗೆ ರೋಹು ಹಾಗೂ ಕಟ್ಲಾ ಮೀನುಗಳನ್ನು ಹಂಚಲಾಗಿತ್ತು.

ಈ ಮೊದಲು ಮೀನುಗರಿಕಾ ಇಲಾಖೆ ಸಚಿವರಾದ ಚಂದ್ರ ನಾಥ್ ಸಿಂಗ್, ತಾವು ಹಿಲ್ಸಾ ಮೀನುಗಳನ್ನು ಶಾಸಕರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಇದರಂತೆ ಸದಸನ ಅವಧಿಯ ಬೆನ್ನಲ್ಲೇ ಮೀನುಗಳನ್ನು ವಿತರಿಸಲಾಗಿತ್ತು.

Comments are closed.