ರಾಷ್ಟ್ರೀಯ

ಮದುವೆ ದಿಬ್ಬಣದ ಟ್ರಕ್‌ ಕಾಲುವೆಗೆ: 28 ಮಂದಿ ಮೃತ್ಯು

Pinterest LinkedIn Tumblr


ಅಹಮದಾಬಾದ್‌: ಗುಜರಾತ್‌ನ ಭಾವನಗರ-ರಾಜಕೋಟ್‌ ಹೆದ್ದಾರಿಯ ಉಮ್ರಾಲಾ ಬಳಿ ಮದುವೆ ದಿಬ್ಬಣದ ಟ್ರಕ್ಕೊಂದು ಕಂದಕಕ್ಕೆ ಉರುಳಿ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಮಂಗಳವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಗುಚಿಬಿದ್ದ ಟ್ರಕ್‌ನ ಅಡಿಯಲ್ಲಿ ಹಲವರು ಸಿಕ್ಕಿಬಿದ್ದಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರುವ ಆತಂಕವಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ದುರಂತದ ಮಾಹಿತಿ ಬಂದ ಕೂಡಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು ಭಾವನಗರ, ಸಿಹೋರ್ ಮತ್ತು ಬೋಟಾಡ್‌ನಿಂದ ಕ್ರೇನ್‌ ಹಾಗೂ ಇತರ ಪರಿಕರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಗ್ನಿಶಾಮಕ ದಳವೂ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ ಎಂದು ಭಾವನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಈ ಟ್ರಕ್‌ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಭಾಗವನಗರ- ರಾಜಕೋಟ್‌ ಹೆದ್ದಾರಿಯಲ್ಲಿ ಉಮ್ರಲಾ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್‌ ಒಣಗಿದ ಕಾಲುವೆಗೆ ಉರುಳಿಬಿತ್ತು.

ಟ್ರಕ್‌ನಲ್ಲಿ ಸುಮಾರು 60 ಜನ ಪ್ರಯಾಣಿಕರಿದ್ದರು. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು’ ಎಂದು ಗುಜರಾತ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಜೆ. ಕದಪಾದ ಸುದ್ದಿಸಂಸ್ಥೆಗೆ ತಿಳಿಸಿದರು.

Comments are closed.