ರಾಷ್ಟ್ರೀಯ

ಸಂಪೂರ್ಣ ಮದ್ಯ ನಿಷೇಧ ಸಾಧ್ಯವಿಲ್ಲ, ಆದರೆ ಮದ್ಯದಂಗಡಿಗಳು ಕಡಿಮೆಯಾಗಲಿ: ಕಮಲ್‌ ಅಭಿಪ್ರಾಯ

Pinterest LinkedIn Tumblr

ಚೆನ್ನೈ: ಕಳೆದ ವಾರವಷ್ಟೇ ಮಕ್ಕಳ್‌ ನೀಥಿ ಮಯ್ಯಂ ಪಕ್ಷವನ್ನು ಸ್ಥಾಪಿಸಿದ ಕಮಲ್ ಹಾಸನ್ ಈಗ ಹಲವಾರು ಸುಧಾರಣಾ ಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ಮಹಿಳೆಯರ ಬಹುದಿನಗಳ ಬೇಡಿಕೆಯಾಗಿರುವ ಮದ್ಯ ನಿಷೇಧ ಕುರಿತು ಕಮಲ್‌ ಹಾಸನ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡುವುದು ಸಾಧ್ಯವಿಲ್ಲ. ಆದರೆ ಈಗಿರುವ ಸಾಕಷ್ಟು ಸಂಖ್ಯೆಯ ಮದ್ಯದಂಗಡಿಗಳನ್ನು ಕಡಿಮೆ ಮಾಡಬಹುದು ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ತಮಿಳು ನಿಯತಕಾಲಿಕದಲ್ಲಿ ಕಮಲ್‌ ಹಾಸನ್‌ ಬರೆದ 22ನೇ ಅಂಕಣ ಇದಾಗಿದೆ.

ಮದ್ಯ ಮಾರಾಟ ನಿಷೇಧ ಪರವಾಗಿ ನಾನಿಲ್ಲ. ಆದರೆ ಮದ್ಯ ಸೇವನೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ ಎಂದು ಕಮಲ್‌ ಹಾಸನ್‌ ವಿವರಿಸಿದ್ದಾರೆ.

ಈ ವಿಷಯದಲ್ಲಿ ಮೊದಲು ರಾಜಕಾರಣಿಗಳು ಎಚ್ಚರ ವಹಿಸಬೇಕು. ಬಹುತೇಕ ಎಲ್ಲ ರಾಜಕಾರಣಿಗಳು ಡಿಸ್ಟಿಲರಿಗಳನ್ನು ಹೊಂದಿದ್ದಾರೆ. ಆದರೆ ವಿಧಾನಸಭೆಯಲ್ಲಿ ಮದ್ಯ ನಿಷೇಧ ಎಂದು ಮಾತನಾಡುತ್ತಾರೆ. ಹೊರಗಡೆ ಅವರದೇ ಡಿಸ್ಟಿಲರಿಯಿಂದ ಮದ್ಯ ಮಾರಾಟ ಮಾಡುತ್ತಾರೆ. ರಾಜಕಾರಣಿಗಳ ದ್ವಂದ್ವ ನಿಲುವು ಮೊದಲು ತೊಲಗಬೇಕು ಎಂದರು.

ಕೇಂದ್ರ ಸರಕಾರ ಹೇರಿರುವ ನೀಟ್‌ ಪರೀಕ್ಷೆಗಳ ಬಗ್ಗೆಯೂ ಕಮಲ್‌ ಗಮನ ಸೆಳೆದಿದ್ದಾರೆ. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಗುಣಮಟ್ಟ ಉತ್ತಮವಾಗಿದೆ. ಆದರೂ ಕೇಮದ್ರ ಸರಕಾರ ನೀಟ್‌ ಹೇರಿದೆ ಎಂದು ಕಮಲ್‌ ಹಾಸನ್‌ ತಿಳಿಸಿದ್ದಾರೆ.

Comments are closed.