ರಾಷ್ಟ್ರೀಯ

‘ಆಧಾರ್‌’ನಿಂದ ಅಂದರ್‌ ಆದ ಕ್ರಿಮಿನಲ್‌!

Pinterest LinkedIn Tumblr


ಬುಲಂದ್‌ಶಹರ್‌: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಗಾರನೊಬ್ಬ ಆಧಾರ್‌ ಕಾರ್ಡ್‌ ಮಾಡಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸಂಭವಿಸಿದೆ. ಕೊಲೆಗಾರನೀಗ ಜೀವಾವಧಿಗೆ ಶಿಕ್ಷೆಗೆ ಗುರಿಯಾಗಿದ್ದಾನೆ.

ಬಂಧಿತ ಮುಂಬಯಿನಲ್ಲಿ ಸ್ನೇಹಿತನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ. (ಸುದ್ದಿಯನ್ನು ಹಿಂದಿಯಲ್ಲಿ ಓದಿ)

ಮುಂಬಯಿನ ಭರಾನ ನಿವಾಸಿ ಸತೀಶ್‌ ಕುಮಾರ್‌ 2009ರಲ್ಲಿ ಸ್ನೇಹಿತ ಅಮರ್‌ನನ್ನು ಹತ್ಯೆಗೈದಿದ್ದ ಎಂದು ಭೋಯಿವಾಡ ದಾದರ್‌ ಪೊಲೀಸ್‌ ಠಾಣೆಯ ಅಧಿಕಾರಿ ದಿಲೀಪ್‌ ಬನ್ಸಾಲ್‌ ತಿಳಿಸಿದ್ದಾರೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸತೀಶ್‌, 2012ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಓಡಿ ಹೋಗಿದ್ದ. ತಲೆಮರೆಸಿಕೊಂಡು 6 ವರ್ಷಗಳೇ ಕಳೆದ ಹಿನ್ನೆಲೆ ಪ್ರಕರಣ ಮುಚ್ಚಿಹೋಗಿರಬಹುದು ಎಂದು ಅಂದಾಜಿಸಿದ ಸತೀಶ್‌ ತನ್ನ ಗ್ರಾಮಕ್ಕೆ ವಾಪಾಸಾಗಿದ್ದ. ಆಧಾರ್‌ ಕಾರ್ಡ್‌ ಮಾಡಿಸುವ ಉದ್ದೇಶದಿಂದ ಸ್ಥಳೀಯ ಇಲಾಖೆಗೆ ಅರ್ಜಿಯನ್ನೂ ಸಲ್ಲಿಸಿದ್ದ. ಆದರೆ ಈ ಸುಳಿವು ಪೊಲೀಸರಿಗೆ ಸಿಕ್ಕಾಗಿತ್ತು. ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯ ಸುಳಿವು ಸಿಗುತ್ತಿದ್ದಂತೆ ಬಲೆ ಬೀಸಿದ ಮುಂಬಯಿ ಪೊಲೀಸರು ಸುಲಭವಾಗಿ ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

Comments are closed.