ರಾಷ್ಟ್ರೀಯ

10ರ ಹರೆಯದ ಮಗನನ್ನು ನೀರಲ್ಲಿ ಮುಳುಗಿಸಿ ಕೊಂದ ಅಪ್ಪ

Pinterest LinkedIn Tumblr


ಜಮ್‌ಶೇದ್‌ಪುರ : ಬುಡಕಟ್ಟು ವ್ಯಕ್ತಿಯೋರ್ವ ತನ್ನ 10 ವರ್ಷ ಪ್ರಾಯದ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಗೈದ ಘಟನೆ ಜಾರ್ಖಂಡ್‌ನ‌ ಪೂರ್ವ ಸಿಂಗಭೂಮ್‌ ಜಿಲ್ಲೆಯಿಂದ ವರದಿಯಾಗಿದೆ.

ಜಾರ್ಖಂಡ್‌ನ‌ ಪೂರ್ವ ಸಿಂಗಭೂಮ್‌ ಜಿಲ್ಲೆಯ ‘ಮೇಲಿನ ಸೋಲಿ’ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಈ ಗ್ರಾಮಕ್ಕೆ ತಾಗಿಕೊಂಡಿರುವ ಗ್ರಾಮದ ಕೊಳವೊಂದರಲ್ಲಿ ಹುಡುಗನ ಶವ ಪತ್ತೆ ಮಾಡಿದುದನ್ನು ಅನುಸರಿಸಿ ಆತನ ತಂದೆ ಬುಡಕಟ್ಟು ವ್ಯಕ್ತಿಯನ್ನು ಬಂಧಿಸಿದರು.

ತನ್ನಿಬ್ಬರು ಸ್ನೇಹಿತರ ನೆರವಿನಲ್ಲಿ ತಾನು ಮಗನನ್ನು ಕೊಳದಲ್ಲಿ ಮುಳುಗಿಸಿ ಕೊಂದದ್ದು ಹೌದೆಂದು ಒಪ್ಪಿಕೊಂಡ ಆತ, ತನ್ನ ಮಗನು ತಾಯಿಯೊಂದಿಗೆ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ; ಆ ಕಾರಣಕ್ಕಾಗಿ ನಾನು ಆತನನ್ನು ಕೊಂದು ಮುಗಿಸಿದೆ ಎಂದು ಪೊಲೀಸರಿಗೆ ಹೇಳಿದ.

ಪೊಲೀಸರೀಗ ಬಾಲಕನ ಕೊಲೆಗೆ ನೆರವಾದ ಆತನ ಇಬ್ಬರು ಸಹಚರರನ್ನು ಹುಡುಕಾಡುತ್ತಿದ್ದಾರೆ.

-ಉದಯವಾಣಿ

Comments are closed.