ರಾಷ್ಟ್ರೀಯ

ಕೇರಳದ ‘ಝಾಕೀರ್ ನಾಯ್ಕ’ ಎಂ.ಎಂ.ಅಕ್ಬರ್ ಬಂಧನ

Pinterest LinkedIn Tumblr


ಕೊಚ್ಚಿ/ದೆಹಲಿ: ಕೇರಳದ ‘ಝಾಕಿರ್ ನಾಯ್ಕ್’ ಎಂದೇ ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಪೀಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಎಂ.ಎಂ.ಅಕ್ಬರ್ ರನ್ನು ಭಾನುವಾರ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಸ್ಟ್ರೇಲಿಯಾದಿಂದ ಹೈದರಾಬಾದಿಗೆ ಆಗಮಿಸಿ, ಸೋಮವಾರ ದೋಹಾಕ್ಕೆ ಪ್ರಯಾಣಿಸಲಿದ್ದರು. ಆದರೆ ಅದಕ್ಕೂ ಮುನ್ನ ಬಂಧನ ನಡೆದಿದೆ. ಅಕ್ಬರ್ ರನ್ನು ಕೇರಳಕ್ಕೆ ಕರೆದೊಯ್ಯಲು ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸು ತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಧರ್ಮದ ಆಧಾರದಲ್ಲಿ ಸಮಾಜದ ವಿವಿಧ ಗುಂಪುಗಳ ನಡುವೆ ದ್ವೇಷ ಹರಡು ತ್ತಿದ್ದ ಆರೋಪದಲ್ಲಿ ಕೊಚ್ಚಿಯ ಅಕ್ಬರ್ ಅವರ ಶಾಲೆ ಮುಚ್ಚಲು ಕೇರಳ ಸರಕಾರ ನಿರ್ಧರಿಸಿದ ಬಳಿಕ ಕಳೆದ ಜನವರಿಯಲ್ಲಿ ಅಕ್ಬರ್ ಸುದ್ದಿಗೆ ಗ್ರಾಸವಾಗಿದ್ದರು.

ಪೀಸ್ ಇಂಟರ್ನ್ಯಾಷನಲ್ ಸ್ಕೂಲ್ ಕೇರಳದ ಜಿಲ್ಲೆಗಳಲ್ಲಿ 13 ಶಾಖೆಗಳನ್ನು ಹೊಂದಿದೆ. ಶಾಲೆಯ ಎರಡನೇ ತರಗತಿಯಲ್ಲಿ ಬೋಧಿಸಲಾಗುತ್ತಿದ್ದ ಪಠ್ಯಪುಸ್ತಕವೊಂದರ ಅಧ್ಯಾಯವನ್ನು ಪೋಷಕರು ಮತ್ತು ಇತರ ಕೆಲವರು ಮಾಧ್ಯಮಗಳಿಗೆ ಸೋರಿಕೆ ಮಾಡಿದ ನಂತರ ರಾಜ್ಯ ಸರಕಾರ ತನಿಖೆ ಆರಂಭಿಸಿತ್ತು. ಶಾಲೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿದ್ದ, ಖಾಸಗಿ ಕಂಪನಿಗಳ ಪ್ರಕಾಶನದ ಪುಸ್ತಕಗಳನ್ನು ಬಳಸುತ್ತಿತ್ತು ಎಂದು ಆರೋಪಿಸಲಾಗಿದೆ.

Comments are closed.