ರಾಷ್ಟ್ರೀಯ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣದ ಸಂಕಲ್ಪ ಬಿಡೆವು: ಅಸಾದುದ್ದೀನ್‌ ಓವೈಸಿ

Pinterest LinkedIn Tumblr


ದೆಹಲಿ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಸಾಕ್ಷಿ ಆಧರಿತವಾಗಿರಲಿದೆಯೇ ಹೊರತು ಯಾವುದೇ ಧಾರ್ಮಿಕ ನಂಬಿಕೆಯಿಂದಲ್ಲ ಎಂದು ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಇದೇ ವೇಳೆ ವಿವಾದಿತ ಜಮೀನಿನಲ್ಲಿ ಬಾಬ್ರಿ ಮಸೀದಿಯನ್ನು ಮರುನಿರ್ಮಾಣ ಮಾಡಲು ತಾವು ಈಗಲು ಕಟಿಬದ್ಧ ಎಂದು ಓವೈಸಿ ಇದೇ ವೇಳೆ ತಿಳಿಸಿದ್ದಾರೆ.

“ಅದೇ ಜಾಗದಲ್ಲಿ ನಮ್ಮ ಮಸೀದಿ ಇತ್ತು, ಇದೆ ಹಾಗು ಮುಂದೆಯೂ ಇರಲಿದೆ. ಸುಪ್ರೀಂ ಕೋರ್ಟ್‌ ನಮ್ಮ ಪರವಾಗಿ ಆದೇಶ ನೀಡಲಿದೆ. ಆದೇಶವು ಧಾಮಿಕ ನಂಬಿಕೆ ಮೇಲೆ ಅಲ್ಲದೇ ಸಾಕ್ಷಿ ಆಧರಿತವಾಗಿರಲಿದೆ ಎಂದು ನಂಬಿದ್ದೇನೆ” ಎಂದು ದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಓವೈಸಿ ಮಾತನಾಡಿದ್ದಾರೆ.

“ನಮ್ಮ ಶರಿಯತ್‌ ವಿರುದ್ಧ ದನಿಯೇರಿಸುತ್ತಿರುವ ಜನರು ನಮ್ಮನ್ನು ಆ ಜಾಗದಿಂದ ಕಾಲ್ತೆಗೆಯಲು ಬೆದರಿಸುತ್ತಿದ್ದಾರೆ. ನಾವು ಮಸೀದಿಯನ್ನು ಎಂದಿಗೂ ಬಿಟ್ಟು ಆಚೆ ಬರುವುದಿಲ್ಲ ಎಂದು ಅವರಿಗೆ ಹೇಳಲು ಇಚ್ಛಸುತ್ತೇನೆ” ಎಂದು ಇದೇ ವೇಳೆ ಓವೈಸಿ ಹೇಳಿದ್ದಾರೆ.

“ಹಿಂದೂ ಮುಸ್ಲಿಂ ಭಾಯಿ ಎಂಬ ಸಿದ್ಧಾಂತದಲ್ಲಿ ನಾವು ನಂಬಿಕೆಯಿಟ್ಟಿದ್ದೇವೆ. ಆದರೆ ಇದು ನಮಗೆ ಎಂದಿಗೂ ಸಹಾಯ ಮಾಡಲಿಲ್ಲ. ದೇಶವೀಗ ಹಿಂದುತ್ವದತ್ತ ಹೊರಳುತ್ತಿದೆ. ನಾವು ದೇಶದಲ್ಲಿ ದ್ವಿತೀಯ ದರ್ಜೆ ನಾಗರಿಕರಾಗಿದ್ದೇವೆ” ಎಂದು ಓವೈಸಿ ತಮ್ಮ ಮಾತಿಗೆ ಸೇರಿಸಿದ್ದಾರೆ.

Comments are closed.