ರಾಷ್ಟ್ರೀಯ

ರಾಷ್ಟ್ರಪತಿಗೆ ಮಾತ್ರ ಸ್ವಾಗತ: ಎಎಂಯು ವಿದ್ಯಾರ್ಥಿ ಸಂಘ

Pinterest LinkedIn Tumblr


ಲಖನೌ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಮಾ.7ರಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಘಟಿಕೋ ತ್ಸವದಲ್ಲಿ ಪಾಲ್ಗೊಳ್ಳಲಿದ್ದು, ವಿವಾದ ವೊಂದು ಹುಟ್ಟಿಕೊಂಡಿದೆ.

ರಾಷ್ಟ್ರಪತಿಯವರಿಗೆ ಸ್ವಾಗತ. ಆದರೆ ಸಂಘ-ಮನೋಭಾವದ ಯಾವುದೇ ವ್ಯಕ್ತಿಗೆ ಪ್ರವೇಶವಿಲ್ಲ ಎಂದು ಎ.ಎಂ.ಯು ವಿದ್ಯಾರ್ಥಿ ಸಂಘ ಹೇಳಿರುವುದಾಗಿ ವರದಿ ಯಾಗಿದೆ. ನಾವು ರಾಷ್ಟ್ರಪತಿಗಳನ್ನು ವಿರೋಧಿಸುವುದಿಲ್ಲ. ಆದರೆ ಸಂಘ-ಮನೋಭಾವದವರನ್ನು ವಿರೋಧಿಸುತ್ತೇವೆ.

2010ರಲ್ಲಿ ರಾಷ್ಟ್ರಪತಿಗಳು ಮುಸ್ಲಿಮರು ಮತ್ತು ಕ್ರೈಸ್ತರು ಹೊರಗಿನವರು ಎಂದು ಹೇಳಿದ್ದರು. ಅವರು ಹಾಗೆ ಹೇಳಿದ್ದರೂ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹೇಳಿರುವುದನ್ನು ಉಲ್ಲೇಖಿಸಲಾಗಿ ದೆ.

Comments are closed.