ರಾಷ್ಟ್ರೀಯ

ಮೇಘಾಲಯದ ಮೋಸ್ಟ್‌ ವಾಂಟೆಡ್‌ ಉಗ್ರ ಎನ್‌ಕೌಂಟರ್‌ನಲ್ಲಿ ಹತ್ಯೆ

Pinterest LinkedIn Tumblr


ಶಿಲಾಂಗ್‌ : ಈಸ್ಟ್‌ ಗ್ಯಾರೋ ಹಿಲ್ಸ್‌ನಲ್ಲಿ ಇಂದು ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೇಘಾಲಯದ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಹತನಾಗಿದ್ದಾನೆ.

ನಿಷೇಧಿತ ಗ್ಯಾರೋ ನ್ಯಾಶನಲ್‌ ಲಿಬರೇಶನ್‌ ಆರ್ಮಿಯ (ಜಿಎನ್‌ಎಲ್‌ಎ) ಸ್ವ ಘೋಷಿತ ಮುಖ್ಯಸ್ಥ ಸೋಹನ್‌ ಡಿ ಶಿರಾ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ. ಆತನ ತಲೆಗೆ 10 ಲಕ್ಷ ರೂ. ಇನಾಮು ಇತ್ತು.

ಇದೇ ಫೆ.18ರಂದು ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ಜೋನಾಥನ್‌ ಎನ್‌ ಸಂಗ್ಮಾ ಅವರ ಐಇಡಿ ದಾಳಿಯಲ್ಲಿ ಮೃತರಾದುದನ್ನು ಅನುಸರಿಸಿ ಈ ಎನ್‌ಕೌಂಟರ್‌ ನಡೆದಿತ್ತು. ಸಂಗ್ಮಾ ಅವರನ್ನು ಬಲಿ ಪಡೆಯಲು ಜಿಎನ್‌ಎಲ್‌ಎ ಬಾಂಬ್‌ ಬ್ಲಾಸ್ಟ್‌ ನಡೆಸಿತ್ತು.

ಮೋಸ್ಟ್‌ ವಾಂಟೆಡ್‌ ಉಗ್ರ ಸೋಹನ್‌ ಡಿ ಶಿರಾ ವಿರುದ್ಧ ಇಂದು ಡೋಬು ಸಮೀಪದ ಅಛಾಪೆಕ್‌ ಗ್ರಾಮದಲ್ಲಿ ಎನ್‌ ಕೌಂಟರ್‌ ನಡೆಸಲಾಗಿತ್ತು.

-ಉದಯವಾಣಿ

Comments are closed.