ರಾಷ್ಟ್ರೀಯ

ಮುಸಲ್ಮಾನಳಾಗಿಯೇ ಇರುವೆ: ಹಾದಿಯಾ

Pinterest LinkedIn Tumblr


ದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ಲವ್ ಜಿಹಾದ್ ಪ್ರಕರಣದ ಕೇಂದ್ರಬಿಂದು ಹಾದಿಯಾ, ತಾವು ಮುಸಲ್ಮಾನಳಾಗಿದ್ದು ಮುಸಲ್ಮಾನಳಾಗಿಯೇ ಮುಂದುವರಿಯಲು ಬಯಸುವುದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಶಾಫಿನ್ ಜಹಾನ್ ಅವರ ಪತ್ನಿಯಾಗಿಯೇ ಉಳಿಯುವುದಾಗಿಯೂ ಹೇಳಿದ್ದಾರೆ.

2017ರ ನವಂಬರ್‌ನಲ್ಲಿ ‘ನನ್ನನ್ನು ಯಾರೂ ಬಲವಂತವಾಗಿ ಇಸ್ಲಂ ಧರ್ಮಕ್ಕೆ ಮತಾಂತರಿಸಿಲ್ಲ. ನಾನು ಮುಸಲ್ಮಾನಳು. ನಾನು ನನ್ನ ಪತಿಯ ಜತೆ ಇರಲು ಬಯಸುತ್ತೇನೆ’ ಎಂದು ಹೇಳಿಕೆ ನೀಡಿದ್ದರು. ಈ ಮಧ್ಯೆ ಸುಪ್ರೀಂ ಕೋರ್ಟ್ 27 ನವಂಬರ್ 2017ರಲ್ಲಿ ಹಾದಿಯಾ ತನ್ನ ಹೋಮಿಯೋಪತಿ ಶಿಕ್ಷಣವನ್ನು ತನ್ನ ಹಳೆಯ ಹಿಂದೂ ಹೆಸರಿನಲ್ಲಿಯೇ ಮುಂದುವರಿಸಬಹುದು ಎಂದು ತಿಳಿಸಿತ್ತು.

ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹಾದಿಯ ಅವರನ್ನು ಮತ್ತೆ ದಾಖಲು ಮಾಡಿಕೊಳ್ಳುವಂತೆ ಸೇಲಂ ಹೋಮಿಯೋಪತಿ ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿತ್ತು.

Comments are closed.