ರಾಷ್ಟ್ರೀಯ

ಗಾಂಧಿ ಹತ್ಯೆ ಹಿಂದಿನ ‘ದೊಡ್ಡ ಪಿತೂರಿ:’ ಮರು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ

Pinterest LinkedIn Tumblr


ಹೊಸದಿಲ್ಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣವನ್ನು ಪುನರ್‌ಪರಿಶೀಲಿಸುವಂತೆ ಮುಂಬಯಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟಿನ ಮೊರೆಹೋಗಿದ್ದು, ಈ ಹತ್ಯೆ ಹಿಂದೆ ‘ದೊಡ್ಡ ಪಿತೂರಿ’ಯಿದೆ ಎಂದು ಆರೋಪಿಸಿದ್ದಾರೆ.

ಮುಂಬಯಿ ಮೂಲದ ಅಭಿನವ್‌ ಭಾರತ್‌ನ ಟ್ರಸ್ಟೀ ಆಗಿರುವ ಪಂಕಜ್‌ ಫದ್ನಿಸ್‌ ಸಲ್ಲಿಸಿರುವ ದಾವೆ ವಿಚಾರಣೆ ನಡೆಸಿದ ಎಸ್‌.ಎ ಬಾಬ್ಡೆ ಮತ್ತು ಜಸ್ಟೀಸ್ ಎಲ್. ನಾಗೇಶ್ವರ ರಾವ್ ಅವರ ವಿಭಾಗೀಯ ಪೀಠ, ಮುಂದಿನ ವಿಚಾರಣೆಯನ್ನು ಮಾರ್ಚ್‌ 6ಕ್ಕೆ ಮುಂದೂಡಿದ್ದಾರೆ.

ಗಾಂಧಿ ಹತ್ಯೆ ಕುರಿತು ಮಹತ್ವದ ದಾಖಲೆಗಳು ಈಗಲೂ ನ್ಯೂಯಾರ್ಕ್‌ನ ಗ್ರಂಥಾಲಯದಲ್ಲಿ ಲಭ್ಯವಿದ್ದು, ಈ ದಾಖಲೆಗಳ ಒಂದು ಪ್ರತಿಯನ್ನು ತಾವು ಸಂಗ್ರಹಿಸಿದ್ದಾಗಿ ಪಂಕಜ್‌ ನ್ಯಾಯಾಲಯಕ್ಕೆ ತಿಳಿಸಿದರು.

‘ಗಾಂಧಿ ಹತ್ಯೆಗೆ ನಡೆಸಲಾಗಿರುವ ಪಿತೂರಿಗಳ ಕುರಿತು ದಾಖಲೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಈ ನಿಷೇಧವನ್ನು ತೆರವುಗೊಳಿಸಬೇಕೆಂದು ಕೋರಿ ಪಂಕಜ್‌ ಈಗಾಗಲೇ ಬಾಂಬೇ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಗಾಂಧೀಜಿ ಹತ್ಯೆ ಸಂದರ್ಭದಲ್ಲಿ ಅವರ ದೇಹದಲ್ಲಿ ನಾಲ್ಕು ಗುಂಡಿನ ಗುರುತುಗಳಿದ್ದವು ಈ ಕರಿತು ಅಂದಿನ ಪತ್ರಿಕೆಗಳು ವರದಿ ಕೂಡಾ ಮಾಡಿದ್ದವು ಎಂದು ನ್ಯಾಯಾಲಯಕ್ಕೆ ಹೇಳಿರುವ ಪಂಕಜ್‌, ‘ಈ ಎಲ್ಲದರ ಕುರಿತು 40 ವರ್ಷ ಅನುಭವವುಳ್ಳ ಹಿರೀಯ ನ್ಯಾಯವಾದಿಯಿಂದ ನಾನು ಮಾಹಿತಿ ಕಲೆ ಹಾಕಿದ್ದೇನೆ, ಅಲ್ಲದೇ ಈ ದಾಖಲೆಗಳನ್ನು ಪರೀಕ್ಷಿಸಲು ವಿಧಿವಿಜ್ಷಾನ ತಂತ್ರಜ್ಞಾನ ಕೂಡಾ ಲಭ್ಯವಿದೆ’ ಎಂದು ಪಂಕಜ್‌ ನುಡಿದಿದ್ದಾರೆ.

ವಿಚಾರಣೆಯನ್ನು ಆಲಿಸಿರುವ ನ್ಯಾಯಾಲಯ ಪಂಕಜ್‌ ಆಗ್ರಹಿಸಿರುವ ದಾಖಲೆಗಳನ್ನು ಪಡೆದುಕೊಳ್ಳಲು ಮನವಿ ಪತ್ರ ಸಲ್ಲಿಸುವಂತೆ ಸೂಚಿಸಿದೆ.

Comments are closed.