ರಾಷ್ಟ್ರೀಯ

ಪ್ರಧಾನಿ ಮೋದಿಯ ವಿಮಾನ ನಿಲುಗಡೆಗೆ ಬಿಲ್‌ ಕಳಿಸಿದ ಪಾಕ್‌

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ವಿಮಾನವು ಲಾಹೋರ್‌ನಲ್ಲಿ ಪಾಕಿಸ್ತಾನದ ವಾಯುಗಡಿಯಲ್ಲಿ ನಿಲುಗಡೆ ಮಾಡಿರುವುದಕ್ಕಾಗಿ ಆ ರಾಷ್ಟ್ರವು 2.86 ಲಕ್ಷ ರೂ. ಬಿಲ್‌ ಕಳಿಸಿರುವುದು ಬಹಿರಂಗವಾಗಿದೆ.

ನಿವೃತ್ತ ಸೇನಾಧಿಕಾರಿ, ಆರ್‌ಟಿಐ ಕಾರ್ಯಕರ್ತ ಲೋಕೇಶ್ ಬಾತ್ರಾ ಅವರು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಕೇಳಿದ್ದ ವಿವರಗಳಿಗೆ ಕೇಂದ್ರ ಸರಕಾರ ನೀಡಿರುವ ಉತ್ತರದಲ್ಲಿ ಇದು ಬಹಿರಂಗಗೊಂಡಿದೆ.

ಪ್ರಧಾನಿ 2016ರ ಜೂನ್ ತಿಂಗಳವರೆಗೂ ಪ್ರಧಾನಿ ಮೋದಿ ನೇಪಾಳ, ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕತಾರ್, ಆಸ್ಟ್ರೇಲಿಯಾ, ಪಾಕಿಸ್ತಾನ, ರಷ್ಯಾ, ಇರಾನ್, ಫಿಜಿ ಮತ್ತು ಸಿಂಗಾಪುರ ಸೇರಿ ಒಟ್ಟು 11 ದೇಶಗಳ ಪ್ರವಾಸ ಮಾಡಿದ್ದಾರೆ. ಈ ಪ್ರವಾಸಗಳ ವೇಳೆ ಅವರ ವಿಮಾನವು ಲಾಹೋರ್‌ನಲ್ಲಿ ನಿಲುಗಡೆಯಾಗಿರುವುದಕ್ಕೆ ಪಾಕಿಸ್ತಾನವು 2.86 ಲಕ್ಷ ರೂ. ಬಿಲ್‌ ಕಳಿಸಿದೆ.

2015ರ ಡಿಸೆಂಬರ್ 25ರಂದು ಮೋದಿ ಪ್ರಯಾಣಿಸುತ್ತಿದ್ದ ವಿಮಾನ ಲಾಹೋರ್‌ನಲ್ಲಿ ಇಳಿದಿತ್ತು. ರಷ್ಯಾ ಮತ್ತು ಅಪಘಾನಿಸ್ತಾನ ಪ್ರವಾಸದಿಂದ ಭಾರತಕ್ಕೆ ವಾಪಸ್ ಆಗುತ್ತಿದ್ದ ಮೋದಿ ದಿಢೀರ್‌ ಆಗಿ ಪಾಕ್‌ ಪಿಎಂ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದರು. ಈ ವೇಳೆ ಪಾಕ್ ವಾಯುಗಡಿ ಪ್ರವೇಶ ಮಾಡಿರುವುದಕ್ಕೆ ಪಾಕಿಸ್ತಾನ 1.49 ಲಕ್ಷ ಬಿಲ್‌ ನೀಡಿದೆ. ಒಟ್ಟಾರೆ 2014ರಿಂದ 2016ರವರೆಗೆ ಮೋದಿ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಿದ್ದಾರೆ ಎಂದು ಪಾಕಿಸ್ತಾನ ಒಟ್ಟು 2.86 ಲಕ್ಷ ರೂ.ವಿಧಿಸಿದೆ. ಇರಾನ್‌ ಭೇಟಿ ವೇಳೆಯ ನಿಲುಗಡೆಗೆ 77,215, ಇರಾನ್‌ ಭೇಟಿಯ ವೇಳೆ ವಿಮಾನ ನಿಲುಗಡೆ ಮಾಡಿದ್ದಕ್ಕೆ 59,215 ರೂ. ಬಿಲ್‌ ನೀಡಿದೆ.

ಲೋಕೇಶ್ ಬಾತ್ರಾ ಅವರು 2018ರ ಜನವರಿ 30ರಂದು ಮಾಹಿತಿ ಪಡೆದುಕೊಂಡಿದ್ದಾರೆ.

Comments are closed.