ರಾಷ್ಟ್ರೀಯ

ಸಾಲ ತೀರಿಸುವ ಸಾಧ್ಯತೆಗಳಿಲ್ಲ: ಬ್ಯಾಂಕ್​ಗೆ ನೀರವ್​ ಪತ್ರ

Pinterest LinkedIn Tumblr


ಮುಂಬೈ: ಸಾವಿರಾರು ಕೋಟಿ ರೂ. ಸಾಲ ಮಾಡಿ ಸಾಲ ತೀರಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಂಚಕ ನೀರವ್​ ಮೋದಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬ್ಯಾಂಕ್​ ಸಾರ್ವಜನಿಕವಾಗಿ ನನ್ನ ಸಾಲದ ಕುರಿತು ಹೇಳಿಕೆ ನೀಡಿ ಸಾಲ ಮರುಪಾವತಿಯ ಎಲ್ಲಾ ಅವಕಾಶದ ಬಾಗಿಲುಗಳನ್ನು ಮುಚ್ಚಿದೆ ಎಂದು ಆರೋಪಿಸಿದ್ದಾರೆ.

ಫೆಬ್ರವರಿ 13 ರಂದು 15ರಂದು ನಾನು ಬ್ಯಾಂಕ್​ಗೆ ಪತ್ರ ಬರೆದು ನಾನು ನೀಡಿದ ಕೊಡುಗೆಯನ್ನು ತಿರಸ್ಕರಿಸಿ ನೀವು ಸಾರ್ವಜನಿಕವಾಗಿ ನನ್ನ ಸಾಲದ ಕುರಿತು ಹೇಳಿಕೆ ನೀಡಿದ್ದೀರಿ. ಇದರಿಂದಾಗಿ ನನ್ನ ಮತ್ತು ನನ್ನ ಕಂಪನಿಯ ಘನತೆಗೆ ಧಕ್ಕೆಯಾಗಿದೆ ಎಂದು ಪಿಎನ್​ಬಿ ಹಗರಣದ ಪ್ರಮುಖ ಆರೋಪಿ ನೀರವ್​ ಬ್ಯಾಂಕ್​ ವಿರುದ್ಧವೇ ಆರೋಪ ಹೊರಿಸಿದ್ದಾರೆ.

ಹಗರಣ ಬಯಲಿಗೆ ಬಂದ ನಂತರ ಫೆಬ್ರವರಿ 16 ರಂದು ಬ್ಯಾಂಕಿನ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ ನೀರವ್​ ಈ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಪತ್ರದಲ್ಲಿ ನಾನು ಬ್ಯಾಂಕಿನಿಂದ ಪಡೆದಿರುವುದು ಕೇವಲ 5000 ಕೋಟಿ ರೂ. ಸಾಲ ಮಾತ್ರ. ಆದರೆ ಬ್ಯಾಂಕ್​ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಪಿಎನ್​ಬಿ ಅತಿಆಸೆಯಿಂದ ತೆಗೆದುಕೊಂಡಿರುವ ಕ್ರಮದಿಂದಾಗಿ ಸಾಲ ತೀರಿಸಲು ಇದ್ದ ಎಲ್ಲ ಸಾಧ್ಯತೆಗಳನ್ನು ಮುಚ್ಚಿ ಹಾಕಿದೆ ಎಂದು ಬ್ಯಾಂಕ್​ ವಿರುದ್ಧವೇ ಹರಿಹಾಯ್ದಿದಿದ್ದಾರೆ.

ಈ ಮೂಲಕ ತಾವು ಭಾರತಕ್ಕೆ ಮರಳಿ ಸಾಲ ಮರುಪಾವತಿ ಕುರಿತು ಭರವಸೆ ಬೇಡ ಎಂದು ಪರೋಕ್ಷವಾಗಿ ಸಂದೇಶವನ್ನು ಬ್ಯಾಂಕಿಗೆ ರವಾನಿಸಿದ್ದಾರೆ.

ನೀರವ್​ ಮೋದಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದ್ದು, ದೇಶಾದ್ಯಂತ ನೀರವ್​ಗೆ ಸೇರಿದ ಕಂಪನಿಗಳು ಮತ್ತು ಆಸ್ತಿಗಳ ಮೇಲೆ ದಾಳೆ ನಡೆಸುತ್ತಿದ್ದಾರೆ. ಜತೆಗೆ ಹಲವರನ್ನು ಬಂಧಿಸಿ ಪಡೆದು ವಿಚಾರಣೆ ನಡೆಸುತ್ತಿವೆ.

Comments are closed.