ರಾಷ್ಟ್ರೀಯ

ಕೇಜ್ರಿ ಪರ ವಕಾಲತ್ತು ವಹಿಸುವುದಿಲ್ಲವೆಂದ ವಕೀಲ

Pinterest LinkedIn Tumblr


ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಸಲ್ಲಿಸಿರುವ ಮಾನ ನಷ್ಟ ಮೊಕದ್ದಮ್ಮೆಯ ವಿಚಾರಣೆ ವೇಳೆ ಆಪ್‌ ಪಕ್ಷದ ನಾಯಕನ ಪರ ತಾವು ವಕಾಲತ್ತು ವಹಿಸುವುದಿಲ್ಲ ಎಂದು ವಕೀಲ ಅನೂಪ್‌ ಜಾರ್ಜ್‌ ಚೌಧರಿ ಹೇಳಿದ್ದಾರೆ.

ವಿತ್ತ ಸಚಿವ ಅರುಣ್‌ ಜೇಟ್ಲಿ ಕೇಜ್ರಿವಾಲ್‌ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಕುರಿತಂತೆ ತಮಗೆ ಸೂಕ್ತ ಮಾಹಿತಿ ಸಿಗದ ಕಾರಣ ಫೆಬ್ರವರಿ 12ರಂದು ನ್ಯಾಯಾಲಯದಲ್ಲಿ ತಮಗೆ ಮುಜುಗರ ಉಂಟಾಗಿದ್ದು ವಕಾಲತ್ತಿನಿಂದ ಹಿಂದೆ ಸರಿಯುವದಾಗಿ ಚೌಧರಿ ತಿಳಿಸಿದ್ದಾರೆ.

ಈ ಮುನ್ನ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ಕೇಜ್ರಿವಾಲ್‌ ಪರ ವಕಾಲತ್ತು ವಹಿಸಲು ನಿರಾಕರಿಸಿದ್ದರು. ಜೇಟ್ಲಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿರಲಿಲ್ಲ ಎಂದು ಕೇಜ್ರಿವಾಲ್‌ ತಮ್ಮ ಬಳಿ ಸುಳ್ಳು ಹೇಳಿದ್ದಾಗಿ ಜೇಠ್ಮಲಾನಿ ತಿಳಿಸಿದ್ದರು.

ಅಲ್ಲದೇ ಕೇಜ್ರಿವಾಲ್‌ ನೀಡಬೇಕಿದ್ದ ಎರಡು ಕೋಟಿ ರುಗಳ ಶುಲ್ಕವನ್ನು ಮನ್ನಾ ಮಾಡುವುದಾಗಿ ಹೇಳಿದ್ದ ಜೇಠ್ಮಲಾನಿ “ಸಾವಿರಾರು ಮಂದಿಗೆ ಉಚಿತವಾಗಿ ವಕಾಲತ್ತು ವಹಿಸುವ ಕಾರಣ ಇದೇನು ಸಮಸ್ಯೆ ಅಲ್ಲ” ಎಂದು ಜೇಠ್ಮಲಾನಿ ಹೇಳಿದ್ದರು.

ಕೇಜ್ರಿವಾಲ್‌ ಸೂಚನೆ ಮೇರೆಗೆ ಕೋರ್ಟ್‌ನಲ್ಲಿ ತಾವು “ಕ್ರೂಕ್‌” ಎಂಬ ಪದ ಬಳಸಿದ್ದಾಗಿ ತಿಳಿಸಿದ್ದ ಜೇಠ್ಮಲಾನಿ, ಬಳಿಕ ತಾವು ಆ ರೀತಿ ಹೇಳಿಯೇ ಇರಲಿಲ್ಲ ಎಂದು ಕೇಜ್ರಿವಾಲ್‌ ಹೇಳಿಕೊಂಡ ಕಾರಣ ವಕಾಲತ್ತಿನಿಂದ ಹಿಂದೆ ಸರಿಯುವುದಾಗಿ ಜೇಠ್ಮಲಾನಿ ತಿಳಿಸಿದ್ದಾರೆ.

ತಮ್ಮ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದೇ ಆಪಾದನೆ ಮಾಡಲಾಗಿದೆ ಎಂದು ಆರೋಪಿಸಿ ಕೇಜ್ರಿವಾಲ್ ಹಾಗು ಆಪ್‌ನ ಇತರ ಐದು ನಾಯಕರ ವಿರುದ್ಧ ಜೇಟ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ದೆಹಲಿ ಹಾಗು ಜಿಲ್ಲಾ ಕ್ರಿಕೆಟ್‌ ಮಂಡಳಿಯ ಚುಕ್ಕಾಣಿ ಹಿಡಿದಿದ್ದ 13 ವರ್ಷಗಳ ಅವಧಿಯಲ್ಲಿ ಜೇಟ್ಲಿ ಭಾಗಿಯಾಗಿದ್ದಾಗಿ ಕೇಜ್ರಿವಾಲ್‌ ಆರೋಪಿಸಿದ್ದರು.

ತಮ್ಮ ಪ್ರತಿಷ್ಠೆಗೆ ಭಂಗವುಂಟಾಗಿದೆ ಎಂದ ವಿತ್ತ ಸಚಿವ ಇದಕ್ಕಾಗಿ ಹತ್ತು ಕೋಟಿ ರು ಪರಿಹಾರ ಕೋರಿದ್ದಾರೆ.

Comments are closed.