ರಾಷ್ಟ್ರೀಯ

ವಿಶ್ವದ ಷೇರು ಮಾರುಕಟ್ಟೆಗಿಂತ ಸುಸ್ಥಿರ ಮುಂಬಯಿ ಷೇರುಪೇಟೆ

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಸರಕಾರ ಬಜೆಟ್‌ನಲ್ಲಿ ಷೇರುದಾರರ ಮೇಲೆ ವಿಧಿಸಿದ ಹೆಚ್ಚುವರಿ ತೆರಿಗೆಯಿಂದಾಗಿ ಮಾರುಕಟ್ಟೆ ಕುಸಿಯುತ್ತಿದೆ ಎಂದು ಆರೋಪಿಸಲಾಗಿತ್ತು. ಆದರೆ ವಾಸ್ತವವೆಂದರೆ, ಇದೇ ಅವಧಿಯಲ್ಲಿ ವಿಶ್ವದ ಮಾರುಕಟ್ಟೆ ಕುಸಿತದ ಮಧ್ಯೆಯೂ ಮುಂಬಯಿ ಷೇರುಪೇಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಫೆಬ್ರವರಿ 1 ರಿಂದ ಜಾಗತಿಕ ಮಾರುಕಟ್ಟೆ ಸರಾಸರಿ ಶೇ. 11ರಷ್ಟು ಕುಸಿದಿದ್ದರೆ, ಮುಂಬಯಿ ಷೇರುಪೇಟೆ ಕೇವಲ ಶೇ. 5.7ರಷ್ಟು ಕುಸಿತ ಕಂಡಿದೆ. ಈ ಪೈಕಿ ಚೀನ ಮಾರುಕಟ್ಟೆ ಭಾರಿ ಇಳಿಕೆ ಕಂಡಿದ್ದು, ಸಿಎಸ್‌ಐ3000 ಶೇ. 10.8, ಹ್ಯಾಂಗ್‌ಸೆಂಗ್‌ ಶೇ. 10.2ರಷ್ಟು ಇಳಿಕೆ ಕಂಡಿದೆ. ಅಮೆರಿಕ ಡೌ ಜೋನ್ಸ್‌ ಶೇ. 10ರಷ್ಟು ಕುಸಿದಿದ್ದರೆ, ಜಪಾನ್‌ನ ನಿಕ್ಕಿ ಶೇ.9.5ರಷ್ಟು ಇಳಿಕೆ ಕಂಡಿದೆ.

ಈ ಮಧ್ಯೆ ಶುಕ್ರವಾರವೂ ಜಾಗತಿಕ ಮಾರುಕಟ್ಟೆಯಲ್ಲಾದ ತಲ್ಲಣದಿಂದಾಗಿ ಮುಂಬಯಿ ಮಾರುಕಟ್ಟೆ ಇಳಿಕೆ ಕಂಡಿದ್ದು, ಸೆನ್ಸೆಕ್ಸ್‌ ಶೇ. 1.18ರಷ್ಟು ಕುಸಿದು, 34,005.76ರಲ್ಲಿ ದಿನದ ಕೊನೆಯಾಗಿದೆ. ಇನ್ನೊಂದೆಡೆ ನಿಫ್ಟಿ 121.90 ಅಂಕ ಕುಸಿದು 10,454.95 ಕ್ಕೆ ದಿನದ ಅಂತ್ಯ ಕಂಡಿದೆ.

-ಉದಯವಾಣಿ

Comments are closed.