ರಾಷ್ಟ್ರೀಯ

ಅತ್ಯಾಚಾರಿಯನ್ನೇ ಮದುವೆಯಾದ ನತದೃಷ್ಟೆಗೆ ಸಿಕ್ಕಿದ್ದು ತ್ರಿವಳಿ ತಲಾಖ್ ಬಹುಮಾನ!

Pinterest LinkedIn Tumblr


ಹಾಪುರ್‌: ಪಂಚಾಯ್ತಿ ತೀರ್ಪಿನಂತೆ ಅತ್ಯಾಚಾರಿಯನ್ನೇ ಮದುವೆಯಾದ ಮಹಿಳೆಗೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ, ವಿವಾಹದ ತಕ್ಷಣವೇ ತ್ರಿವಳಿ ತಲಾಖ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯರ ದುಃಸ್ಥಿತಿಗೆ ಕನ್ನಡಿ ಹಿಡಿಯುವಂತಹ ಈ ಆಘಾತಕಾರಿ ಘಟನೆ ನಡೆದಿದ್ದು ಉತ್ತರ ಪ್ರದೇಶದ ಹಾಪುರ್‌ನಲ್ಲಿ.

ಹಳ್ಳಿ ಪಂಚಾಯ್ತಿಯ ತೀರ್ಪಿನಂತೆ ಅತ್ಯಾಚಾರಿ ಜೊತೆಯೇ ಮಗಳ ವಿವಾಹ ನೆರವೇರಿಸಿದ್ದೇವೆ. ಆದರೆ, ದುಷ್ಟ ಪತಿ ತನ್ನ ಮಗಳಿಗೆ ತಲಾಖ್ ನೀಡಿ ಅಟ್ಟಹಾಸ ಮೆರೆದಿದ್ದಾನೆ ಎಂದು ಸಂತ್ರಸ್ತ ಮಹಿಳೆಯ ಚಿಕ್ಕಪ್ಪ ಅಳಲು ತೋಡಿಕೊಂಡಿದ್ದಾರೆ. ‘ನನ್ನ ಮಗಳು ಪತಿಯಿಂದ ಸಾಕಷ್ಟು ನೋವು ಅನುಭವಿಸಿದ್ದಾಳೆ’ ಎಂದು ಅವರು ದೂರಿದ್ದಾರೆ.

‘ನನ್ನ ಹಾಗೂ ನನ್ನ ತಂದೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಅದೇ ಸ್ಥಳದಲ್ಲಿ ಮೂರು ಬಾರಿ ತಲಾಖ್ ಹೇಳುವ ಮೂಲಕ ನನ್ನ ಜೀವನವನ್ನೇ ಹಾಳು ಮಾಡಿದ್ದಾರೆ. ನನಗೆ ನ್ಯಾಯ ಸಿಗಬೇಕು’ ಎಂದು ಸಂತ್ರಸ್ತ ಮಹಿಳೆ ಕಣ್ಣೀರಿಟ್ಟಿದ್ದಾರೆ.

ಈ ಸಂಬಂಧ ಹಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Comments are closed.