ರಾಷ್ಟ್ರೀಯ

ಬ್ಯಾಂಕ್‌ ವಂಚನೆ: ಆಂಧ್ರ ಬ್ಯಾಂಕ್‌ ಮಾಜಿ ನಿರ್ದೇಶಕ ಜೈಲಿಗೆ

Pinterest LinkedIn Tumblr


ಹೊಸದಿಲ್ಲಿ: ಗುಜರಾತಿನ ಫಾರ್ಮಾ ಕಂಪೆನಿಯೊಂದರ ಜತೆ ಸೇರಿ 5,000 ಕೋಟಿ ರೂ. ಬ್ಯಾಂಕ್‌ ವಂಚನೆಗೈದಿರುವ ಆರೋಪಕ್ಕೆ ಗುರಿಯಾಗಿ ಬಂಧಿಸಲ್ಪಟ್ಟು ಜಾರಿ ನಿರ್ದೇಶನಾಲಯದ ತನಿಖೆಗೆ ಗುರಿಯಾಗಿರುವ ಆಂಧ್ರ ಬ್ಯಾಂಕಿನ ಮಾಜಿ ನಿರ್ದೇಶಕ ರೊಬ್ಬರನ್ನು ಇಲ್ಲಿನ ನ್ಯಾಯಾಲಯ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ 9 ದಿನಗಳ ತನಿಖೆಗೆ ಗುರಿಯಾದ ಬಳಿಕ ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾದ ಬಂಧಿತ ಆಂಧ್ರ ಬ್ಯಾಂಕ್‌ ಮಾಜಿ ನಿರ್ದೇಶಕ ಅನೂಪ್‌ ಪ್ರಕಾಶ್‌ ಗರ್ಗ್‌ ಅವರನ್ನು ಇಲ್ಲಿನ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ, ಸಿದ್ಧಾರ್ಥ ಶರ್ಮಾ ಅವರು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ದಿಲ್ಲಿ ಮೂಲದ ಉದ್ಯಮಿ ಗಗನ್‌ ಧವನ್‌ ಎಂಬವರನ್ನು ಜಾರಿ ನಿರ್ದೇಶನಾಲಯದವರು ಈ ಕೇಸಿಗೆ ಸಂಬಂಧಿಸಿ ಬಂಧಿಸಿದ ತರುವಾಯ ಜನವರಿ 12ರಂದು ಗರ್ಗ್‌ ಅವರನ್ನು ಬಂಧಿಸಿದ್ದರು.

-ಉದಯವಾಣಿ

Comments are closed.