ರಾಷ್ಟ್ರೀಯ

ಹತ್ತು ರೂ. ಆಮಿಷವೊಡ್ಡಿ ಸೋದರನೆದುರು ಬಾಲಕಿಯ ರೇಪ್‌

Pinterest LinkedIn Tumblr


ಗ್ರೇಟರ್‌ ನೋಯ್ಡಾ: ಪೊಲೀಸ್‌ ಸಿಬ್ಬಂದಿಯೊಬ್ಬ ಹತ್ತು ರೂ. ಆಮಿಷವೊಡ್ಡಿ ಏಳು ವರ್ಷದ ಬಾಲಕಿಯ ಮೇಲೆ ಆಕೆಯ ಅಣ್ಣನ ಎದುರೇ ಅತ್ಯಾಚಾರ ನಡೆಸಿದ್ದಾನೆ.

ಗೌತಮಬುದ್ಧ ನಗರದಲ್ಲಿ ಘಟನೆ ನಡೆದಿದ್ದು, ಬಾಲಕಿ ಕಿರುಚಾಡಿದ ಧ್ವನಿ ಕೇಳಿ ಜನ ಸೇರಲಾರಂಭಿಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಮರುದಿನ ಆತ ತನ್ನ ಬಡಿಗೆಯ ಕೊಠಡಿಗೆ ಬಂದಾಗ ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಂತ್ರಸ್ತ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಪಾಕಿಸ್ತಾನದಲ್ಲಿ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಂಡಿಸಿ ಟಿವಿ ನಿರೂಪಕಿಯೊಬ್ಬರು ಮಗುವನ್ನು ಮಡಿಲಲ್ಲಿ ಕೂರಿಸಿ ಸುದ್ದಿ ಓದುವ ಮೂಲಕ ಪ್ರತಿಭಟನೆ ದಾಖಲಿಸಿದ್ದಾರೆ. ಮಗುವಿನ ಕುಟುಂಬ ಮತ್ತು ಸ್ಥಳೀಯರು ಅತ್ಯಾಚಾರ ನಡೆಸಿದ್ದ ಪೊಲೀಸ್‌ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದರು. ಸೆಲೆಬ್ರಿಟಿಗಳು ಕೂಡ ಪಾಕಿಸ್ತಾನದಲ್ಲಿ ನಡೆದಿರುವ ಕೃತ್ಯವನ್ನು ಖಂಡಿಸಿ ಅಭಿಯಾನ ಆರಂಭಿಸಿದ್ದಾರೆ.

Comments are closed.