ರಾಷ್ಟ್ರೀಯ

ಬಿಜೆಪಿಯನ್ನು ಸೋಲಿಸಲು ನಾವೂ ಬಿಜೆಪಿಯಾಗುವುದೇ ಪರಿಹಾರವಲ್ಲ: ರಾಹುಲ್ ಕಾಲೆಳೆದ ಒವೈಸಿ

Pinterest LinkedIn Tumblr

ನವದೆಹಲಿ: ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಮುಸ್ಲಿಮರ ಮೂಲೆಗುಂಪಾಗಿಸುವಿಕೆಯ ಸಂಕೇತವಾಗಿದೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.

ಗುಜರಾತ್ ರಾಜ್ಯ ಚುನಾವಣಾ ಫಲಿತಾಂಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣಾ ಫಲಿತಾಂಶ ಮುಸ್ಲಿಮರು ಮೂಲೆಗುಂಪಾಗುವ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂದಿರಗಳಿಗೆ ಭೇಟಿ ನೀಡಿದ ಬಳಿಕ ಮತದಾರರ ಬಳಿ ತೆರಳುತ್ತಿದ್ದರು. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತೊಂದು ಬಿಜೆಪಿಯಾಗುವುದು ಪರಿಹಾರವಲ್ಲ. ನಿಮಗೂ ಹಾಗೂ ಬಿಜೆಪಿಗೂ ಇರುವ ವ್ಯತ್ಯಾಸವನ್ನು ನೀವು ತೋರಿಸಬೇಕು ಎಂದು ಕಾಂಗ್ರೆಸ್’ಗೆ ಹೇಳಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿಯವರ ಕಾಲೆಳೆದಿರುವ ಅವರು, ಗುಜರಾತ್ ನಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಅತ್ಯುತ್ತಮ ಅವಕಾಶ ದೊರಕಿತ್ತು. ಆದರೆ, ಸಿಕ್ಕಿದ್ದ ಅವಕಾಶವನ್ನು ಬಳಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಸರಕು ಮತ್ತು ಸೇವಾ ತೆರಿಗೆಯಿಂದಾಗಿ ವ್ಯಾಪಾರಿಗಳ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿತ್ತು. ಸೂರತ್ ವ್ಯಾಪಾರಿಗಳ ತಾಣವಾಗಿದ್ದು. ಇಲ್ಲಿ ದೊರಕಿದ್ದ ಅವಕಾಶವನ್ನೂ ಕಾಂಗ್ರೆಸ್ ಸರಿಯಾಗಿ ಬಳಸಿಕೊಂಡಿಲ್ಲ.

ದೇಶದಲ್ಲಿ ಬಿಜೆಪಿ ಯಂತ್ರದಂತೆ ಕೆಲಸ ಮಾಡುತ್ತಿದೆ. ಆಡಳಿತಾರೂಢ ಪಕ್ಷವನ್ನು ಸೋಲಿಸಬೇಕಾದರೆ, ಎಲ್ಲರೂ ಒಗ್ಗೂಡಬೇಕು. ಅಖಿಲೇಶ್ ಯಾದವ್ ಆಗಲೀ, ಓವೈಸಿ, ಮಮತಾ ಬ್ಯಾನರ್ಜಿ ಯಾರೇ ಆದರು ಬಿಜೆಪಿಯನ್ನು ಒಬ್ಬಂಟಿಯಿಂದ ಸೋಲಿಸಲು ಸಾಧ್ಯವಿಲ್ಲ. ಬಿಜೆಪಿ ಸೋಲಿಸಲು ನಾವೆಲ್ಲರೂ ಒಗ್ಗೂಡಬೇಕು ಎಂದು ತಿಳಿಸಿದ್ದಾರೆ.

ದೇಶದಲ್ಲಿ ವಿರೋಧ ಪಕ್ಷಗಳು ದುರ್ಬಲಗೊಂಡಾಗಲ ಪ್ರಜಾಪ್ರಭುತ್ವ ಸ್ವಯಂ ವಿರೋಧ ಪಕ್ಷವಾಗುತ್ತವೆ. ಬಳಿಕ ತಮಗಿಷ್ಟವಾದ ನಾಯಕರಿಗೆ ಮತಹಾಕಿ ಪಕ್ಷವು ಅಧಿಕಾರಕ್ಕೆ ಬರುವಂತೆ ಮಾಡುತ್ತವೆ. ಗುಜರಾತ್ ನಲ್ಲಿ ತಾವು ಉತ್ತಮವಾಗಿ ಕೆಲಸ ಮಾಡಿದೆವು ಎಂದು ಬಿಜೆಪಿ ತಿಳಿದಿದ್ದೇ ಆದರೆ, ಆ ಬಗ್ಗೆ ಮರು ಚಿಂತನೆ ನಡೆಸಲಿ. ಔರಂಗಜೇಬ್ ಮತ್ತು ಪಾಕಿಸ್ತಾನದ ಹೆಸರಿನಲ್ಲಿ ಬಿಜೆಪಿ ಯಾವಾಗಲೂ ಮತಗಳನ್ನು ಪಡೆಯುತ್ತದೆಯೇ ಎಂದಿದ್ದಾರೆ.

Comments are closed.