ರಾಷ್ಟ್ರೀಯ

ಗುಜರಾತ್ ಫಲಿತಾಂಶ ನೋಡಿದರೆ ಜನ ಖುಷಿಯಾದಂತಿಲ್ಲ: ಶಿವ ಸೇನೆ

Pinterest LinkedIn Tumblr

ಮುಂಬೈ: ಗುಜರಾತ್ ನಲ್ಲಿ ಬಿಜೆಪಿ ಚುನಾವಣಾ ಫಲಿತಾಂಶ ಸಾಗುತ್ತರುವುದು ನೋಡಿದರೆ ಜನರು ಖುಷಿಯಾಗಿರುವಂತೆ ಕಂಡುಬರುತ್ತಿಲ್ಲ ಎಂದು ಶಿವಸೇನೆ ಹೇಳಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಲಕ್ಷಣಗಳು ಕಂಡುಬರುತ್ತಿದ್ದು 182 ಸ್ಥಾನಗಳಲ್ಲಿ 101 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು ಕಾಂಗ್ರೆಸ್ 71 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗುಜರಾತ್ ವಿಧಾನಸಭೆಯಲ್ಲಿ ಬಹುಮತ ಗೆಲ್ಲಲು ಬೇಕಾದ ಸಂಖ್ಯೆ 92.

ಬಿಜೆಪಿಯ ಬಾಬುಭಾಯಿ ಬೊಖಿರಿಯಾ ಪೋರಬಂದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅರ್ಜುನ್ ಮೊದ್ವಡಿಯಾ ಅವರನ್ನು ಸಾವಿರದ 855 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿಯ ಸುರೇಶ್ ಭಾರದ್ವಾಜ್ ಸ್ವತಂತ್ರ ಅಭ್ಯರ್ಥಿ ಹರೀಶ್ ಜನಾರ್ತ ಅವರನ್ನು ಶಿಮ್ಲಾ ಕ್ಷೇತ್ರದಲ್ಲಿ 1,903 ಮತಗಳಿಂದ, ಅನ್ನಿಯಲ್ಲಿ ಬಿಜೆಪಿಯ ಕಿಶೋರಿ ಲಾಲ್ ಕಾಂಗ್ರೆಸ್ ನ ಪರಸ ರಾಮ್ ಅವರನ್ನು 5,983 ಮತಗಳಿಂದ ಸೋಲಿಸಿದ್ದಾರೆ.

ಗುಜರಾತ್ ಮಾದರಿ ಅಭಿವೃದ್ಧಿಯಿಂದ ದೇಶದಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಗುಜರಾತ್ ನ ಜನತೆ ಇಂದು ಬಿಜೆಪಿಯಲ್ಲಿ ಒಲವು ತೋರಿಲ್ಲವೆಂದರೆ ಜನರ ಮನೋಭಾವನೆಯನ್ನು ಅರ್ಥ ಮಾಡಿಕೊಳ್ಳಿ, ದೇಶದ ಜನತೆ ಏನು ಭಾವಿಸಿಕೊಂಡಿರಬಹುದು ಎಂದು ತಿಳಿಯಿರಿ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಬಿಜೆಪಿ ಗುಜರಾತ್ ಜನತೆಯ ಮನೋಧರ್ಮವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲಿನ ಜನತೆ ಇಂದು ಬಿಜೆಪಿ ಬಗ್ಗೆ ಸಂತೋಷವಾಗಿಲ್ಲ ಎಂದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ವಿಷಯದಲ್ಲಿಯೂ ಯಶಸ್ಸು ದಾಖಲಿಸಿಲ್ಲ. ಅದು ಭದ್ರತೆ, ಕಾಶ್ಮೀರ ವಿವಾದ, ಪಾಕಿಸ್ತಾನ, ನೋಟು ನಿಷೇಧ, ನಿರುದ್ಯೋಗ ಸಮಸ್ಯೆ ನಿವಾರಣೆ ಅಥವಾ ರೈತರ ಆತ್ಮಹತ್ಯೆ ತಡೆಯುವ ವಿಷಯದಲ್ಲಿಯಾಗಿರಲಿ ಯಾವುದರಲ್ಲಿ ಕೂಡ ಜನತೆಗೆ ಪ್ರಯೋಜನವಾಗಿಲ್ಲ, ಇದು ನಾನು ಇಂದಿನ ಗುಜರಾತ್ ಫಲಿತಾಂಶದಿಂದ ತಿಳಿದುಕೊಂಡ ವಿಷಯ ಎಂದರು.

ಇನ್ನೊಂದೆಡೆ ಇಂದು ಬಿಜೆಪಿಯ ಮೈತ್ರಿಯೆನಿಸಿಕೊಂಡಿರುವ ಶಿವಸೇನೆ ಗುಜರಾತ್ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿಯನ್ನು ಶ್ಲಾಘಿಸಿದ್ದು, ಫಲಿತಾಂಶವನ್ನು ಲೆಕ್ಕಿಸದೆ ಗುಜರಾತ್ ವಿಧಾನಸಭೆಗೆ ರಾಹುಲ್ ಗಾಂಧಿ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ ಎಂದಿದ್ದರು.

Comments are closed.