ರಾಷ್ಟ್ರೀಯ

8 ಸಾವಿರಕ್ಕೂ ಅಧಿಕ ಮದ್ರಸಾಗಳನ್ನು ಆಧುನೀಕರಣಗೊಳಿಸಲು ಮುಂದಾಗಿರುವ ಯೋಗಿ ಸರಕಾರ

Pinterest LinkedIn Tumblr

ಲಖನೌ: ರಾಜ್ಯದಲ್ಲಿರುವ ಸುಮಾರು 8 ಸಾವಿರ ಮದ್ರಸಾಗಳನ್ನು ಆಧುನೀಕರಣಗೊಳಿಸಲು ಉತ್ತರ ಪ್ರದೇಶ (ಯುಪಿ) ಮದ್ರಸಾ ಶಿಕ್ಷಣ ಮಂಡಳಿ ಮುಂದಾಗಿದೆ. ಈಗಾಗಲೇ 8,521 ಮದ್ರಸಾಗಳು ಉತ್ತಮ ಗಣಮಟ್ಟದ ಶಿಕ್ಷಣ ಒದಗಿಸುವ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬೋರ್ಡ್ ಆನ್‌ಲೈನ್ ಪೋರ್ಟಲ್‌ನಲ್ಲಿ ಸುಮಾರು 16,705 ಮದ್ರಸಾಗಳು ನೋಂದಣಿ ಮಾಡಿಕೊಂಡಿವೆ. ಉಳಿದ 8,184 ಮದ್ರಸಾಗಳಿಗೆ ಅನುದಾನ ನೀಡುವಂತೆ ಕೇಂದ್ರದ ಬಳಿ ಮನವಿ ಮಾಡಲಾಗುತ್ತಿದೆ.

ರಾಜ್ಯದಲ್ಲಿರುವ ಎಲ್ಲಾ ಮದ್ರಸಾಗಳಲ್ಲಿ ಏಕ ರೂಪದ ಶಿಕ್ಷಣ ನೀಡುವುದು ಸರಕಾರದ ಉದ್ದೇಶ. ಆದರೆ, ಕೇವಲ 8 ಸಾವಿರ ಮದ್ರಸಾಗಳನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಅರ್ಹತೆ ಪಡೆದಿರುವ ಉಲಿದ ಮದ್ರಸಾಗಳನ್ನೇಕೆ ಆಧುನೀಕರಣಗೊಳಿಸುತ್ತಿಲ್ಲ ಎಂದು ರಿಜಿಸ್ಟಾರ್ ರಾಹುಲ್ ಗುಪ್ತಾ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಆಧುನಿಕ ವಿಷಯಗಳ ಬಗ್ಗೆ ಬೋದಿಸುವ ಶಿಕ್ಷಕರ ಸಂಖ್ಯೆಯನ್ನು ಸಹ ಹೆಚ್ಚಿಸಬೇಕು ಎಂದು ಮದ್ರಸಾ ಶಿಕ್ಷಣ ಮಂಡಳಿ ಮನವಿ ಮಾಡಿದೆ.

ಉತ್ತರ ಪ್ರದೇಶದ 16 ಸಾವಿರ ಮದರಸಾಗಳಲ್ಲಿ ಸುಮಾರು 30 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆಧುನಿಕ ವಿಷಯಗಳನ್ನು ಬೋಧಿಸಲು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ತಲುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

Comments are closed.