ರಾಷ್ಟ್ರೀಯ

ಆನ್‌ಲೈನ್‌ ಡೇಟಿಂಗ್‌ನಲ್ಲಿ ಹುಡುಗಿಯರು ಮಾಡುವ ತಪ್ಪುಗಳಿವು

Pinterest LinkedIn Tumblr


ಮದುವೆ ಬ್ರೋಕರ್‌ಗಳು ಮಾಡುವ ಕಾರ್ಯವನ್ನು ಇದೀಗ ಆನ್‌ಲೈನ್ ಸೈಟ್‌ಗಳು ಮಾಡುತ್ತಿವೆ. ಆದರೆ ಈ ಆನ್‌ಲೈನ್‌ನಲ್ಲಿ ತಮ್ಮ ಬಾಳ ಸಂಗಾತಿಯನ್ನು ಹುಡುಕುವಾಗ ತುಂಬಾ ಹುಷಾರಾಗಿರಬೇಕು.

ಆನ್‌ಲೈನ್‌ ಪ್ರೊಫೈಲ್ಸ್‌ ನೋಡುವಾಗ ಯಾರಾದರೂ ಮೆಚ್ಚುಗೆಯಾದರೆ ಅವರನ್ನು ಭೇಟಿ ಮಾಡಲು ಬಯಸುತ್ತೇವೆ. ಅದನ್ನು ಈಗೀನ ಟ್ರೆಂಡ್‌ನಲ್ಲಿ ಡೇಟಿಂಗ್ ಅಂತೀವಿ. ಈ ಡೇಟಿಂಗ್‌ನಲ್ಲಿ ಅವರು ನಮ್ಮ ಬಾಳ ಸಂಗಾತಿಯಾಗಲು ಸೂಕ್ತರೇ? ಎಂದು ನಿರ್ಧರಿಸುತ್ತೇವೆ.

ಹೀಗೆ ಬಾಳಸಂಗಾತಿ ಹುಡುಕುವಾಗ ಹುಡುಗಿಯರು ತಮಗರಿವಿಲ್ಲದೆಯೇ ಏನೋ ಬಿಂಬಿಸಿಕೊಳ್ಳಲು ಹೋಗಿ ಕೆಲವೊಂದು ಮಿಸ್ಟೇಕ್ಸ್‌ ಮಾಡುತ್ತಾರೆ.

ನೀವು ಎಲ್ಲಾದರೂ ಬಾಳ ಸಂಗಾತಿ ಹುಡುಕಾಟದಲ್ಲಿದ್ದರೆ ಈ ತಪ್ಪುಗಳನ್ನು ಮಾಡದಿರಿ:

ಕೆಟ್ಟ ಪ್ರೊಫೈಲ್‌ ಹಾಕುವುದು
ವಿಚಿತ್ರವಾದ ಪ್ರೊಫೈಲ್ ಫೋಟೊಗಳನ್ನು ಹಾಕಿಕೊಳ್ಳುವುದು, ಮಾಹಿತಿಯಲ್ಲಿ ಅಕ್ಷರ ತಪ್ಪುಗಳಿರುವುದು ಈ ರೀತಿಯ ತಪ್ಪುಗಳ ಬಗ್ಗೆ ಎಚ್ಚರವಹಿಸಿ. ಅಲ್ಲದೆ ನಿಮ್ಮ ಬಗ್ಗೆ ಎಲ್ಲಾ ವಿವರಗಳನ್ನು ನೀಡಬೇಡಿ. ಅಗತ್ಯವಿರುವ ಕೆಲವೊಂದು ಮಾಹಿತಿಯಷ್ಟೇ ಹಾಕುವುದು ಒಳ್ಳೆಯದು.

ನಿಮಗೆ ಏನು ಬೇಕೋ ಅದೇ ತಿಳಿಯದಿರುವುದು
ಮುಂದಿನ ಬದುಕು ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಆದರೆ ಬದುಕು ಹೇಗೆ ಇರಬೇಕು ಎಂಬ ಸ್ಪಷ್ಟ ಕಲ್ಪನೆ ನಿಮ್ಮಲ್ಲಿರಬೇಕು. ನಿಮಗೆ ಮದುವೆಯಾದ ಮೇಲೆ ಕೆಲಸ ಮಾಡಬೇಕೆಂದು ಇರುತ್ತದೆ. ಆದರೆ ಆತನಿಗೆ ಇಷ್ಟವಿಲ್ಲದಿರಬಹುದು. ಇಂಥದ್ದೆಲ್ಲಾ ಮೊದಲೇ ಮಾತನಾಡದಿದ್ದರೆ ಮುಂದೆಕ್ಕೆ ತೊಂದರೆ ಉಂಟಾಗಬಹುದು.

ನೀವು ನೀವಾಗಿ ಇರಿ
ನಿಮ್ಮದಲ್ಲದ ವ್ಯಕ್ತಿತ್ವದ ತೋರಿಕೆ ಬೇಡ. ನೀವು ಹೇಗಿದ್ದಾರೋ ಹಾಗೇ ಇರಿ.

ಅತೀಯಾದ ಕುತೂಹಲ ಬೇಡ
ಮೊದಲ ಸಲ ಭೇಟಿಯಾದಾಗ ಇಬ್ಬರು ಜತೆಯಾಗಿ ಫೋಟೊ ತೆಗೆಯುವುದು, ನಿಮ್ಮ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಇದ್ಯಾವುದು ಬೇಡ.

ತುಂಬಾ ಎಮೋಷನಲ್‌ ಆಗಬೇಡಿ

ಒಂದೇ ಭೇಟಿಯಲ್ಲಿ ಎಲ್ಲವನ್ನು ನಿರ್ಧರಿಸಬೇಡಿ
ಜಸ್ಟ್‌ ಫ್ರೆಂಡ್‌ನಂತೆ ಆ ವ್ಯಕ್ತಿ ಜತೆ ಮಾತುಕತೆ ನಡೆಸಿ. ಆಗ ನಿಮಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಬಹುದು.

Comments are closed.