ರಾಷ್ಟ್ರೀಯ

ಮದುವೆ ನಂತರ ಪತ್ನಿಯ ಧರ್ಮ ಗಂಡನ ಧರ್ಮದ ಜತೆ ಸೇರುವುದಿಲ್ಲ: ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ: ಮದುವೆಯಾದ ನಂತರ ಪತ್ನಿಯು ಪತಿಯ ಧರ್ಮದವಳಾಗುವುದಿಲ್ಲ. ಅಥವಾ ಪತಿಯ ಜಾತಿಯ ಜತೆ ಪತ್ನಿಯ ಜಾತಿಯೂ ಸೇರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ತಮ್ಮ ಪೋಷಕರ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್‌, ಡಿ.ವೈ.ಚಂದ್ರಚೂಡ್‌, ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಂಡಿತು.

ಬೇರೆ ಸಮುದಾಯದ ಪುರುಷನನ್ನು ವಿವಾಹವಾಗಿದ್ದ ಪಾರ್ಸಿ ಮಹಿಳೆಯು ತಂದೆ-ತಾಯಿಯ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಆಕೆ ಬೇರೆ ಸಮುದಾಯದವಳಾಗಿದ್ದಾಳೆಂದು ವಲ್ಸಾದ್‌ ಜೊರೊಸ್ಟ್ರಿಯನ್‌ ಟ್ರಸ್ಟ್‌ ನಿಷೇಧ ಹೇರಿತ್ತು.

ಇದನ್ನು ಪ್ರಶ್ನಿಸಿ ಗೂಲ್‌ರುಕ್‌ ಎಂ. ಗುಪ್ತಾ ಕಾನೂನಿನ ಮೊರೆ ಹೋಗಿದ್ದರು.

ಈಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ಆಕೆ ಮದುವೆಯಾದ ಮಾತ್ರಕ್ಕೆ ಮತಾಂತರವಾಗುವ ಅಗತ್ಯವಿಲ್ಲ. ಆಕೆ ಮದುವೆಯಾದ

Comments are closed.