ರಾಷ್ಟ್ರೀಯ

ಸಿನಿಮೀಯ ಸ್ಟೈಲ್‌ನಲ್ಲಿ ಪ್ರಿಯಕರನ ಜತೆ ಮದುಮಗಳು ಪಲಾಯನ

Pinterest LinkedIn Tumblr


ಹೈದರಾಬಾದ್: ಅವರಿಬ್ಬರು ಪ್ರೀತಿಸುತ್ತಿರುತ್ತಾರೆ, ಅವಳಿಗೆ ಮತ್ತೊಬ್ಬನೊಂದಿಗೆ ಮದುವೆಗೆ ಎಲ್ಲಾ ಸಿದ್ಧತೆ ನಡೆದಿರುತ್ತಿದೆ. ಮದುಮಗ-ಮದುಮಗಳ ಮನೆಯವರೆಲ್ಲರೂ ಹಾಲ್‌ಗೆ ಬರುತ್ತಾರೆ.

ಮದುವೆಗೆ ಬಂದ ಗುಂಪಿನಲ್ಲಿ ಅವಳು ಪ್ರೀತಿಸುತ್ತಿರುವ ಹುಡುಗನೂ ಇರುತ್ತಾನೆ. ಇನ್ನೇನು ಕೆಲ ನಿಮಿಷಗಳಲ್ಲಿ ಮದುವೆ ಶಾಸ್ತ್ರ ಮುಗಿಯುವುದು ಎನ್ನುವಷ್ಟರಲ್ಲಿ ಆ ಹುಡುಗಿ ನನಗೆ ಈ ಮದುವೆ ಇಷ್ಟವಿಲ್ಲವೆಂದು ಹೇಳಿ ತನ್ನ ಪ್ರೇಮಿ ಬಳಿ ಓಡಿ ಬರುತ್ತಾಳೆ. ಎಲ್ಲರೂ ನೋಡು ನೋಡುತ್ತಿದ್ದಂತೆ ಅವರಿಬ್ಬರು ಓಡಿ ಹೋಗುತ್ತಾರೆ.

ಈ ರೀತಿಯ ದೃಶ್ಯವನ್ನು ಸಿನಿಮಾಗಳಲ್ಲಿ ನೋಡುವಾಗ ವಾವ್! ರೊಮ್ಯಾಂಟಿಕ್‌ ಅನಿಸುತ್ತದೆ. ಅದೇ ನಿಜ ಜೀವನದಲ್ಲಿ ಅಥವಾ ನಾವು ಹೋದ ಮದುವೆಯಲ್ಲಿ ನಡೆದರೆ? ಛೀ.. ಹೀಗೆ ಯಾವ ಮದುವೆ ಗಂಡಿಗೂ ಆಗದಿರಲಿ ಅಂದ್ಕೊಳ್ಳುತ್ತಿದ್ದೀರಾ?

ಆದರೆ ಇಂಥದ್ದೊಂದು ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಅದೊಂದು ಕ್ರಿಶ್ಚಿಯನ್ ಮದುವೆಯಾಗಿತ್ತು. ಮದುವೆ ವಿಧಿ ವಿಧಾನವನ್ನು ಮುಗಿಸಲು ಮದುಮಗ-ಮದುಮಗಳು ಚರ್ಚ್‌ಗೆ ಬಂದಿದ್ದರು. ಅಲ್ಲಿಯ ಪಾದ್ರಿ ಮದುವೆ-ವೈವಾಹಿಕ ಬದುಕಿನ ಕುರಿತು ನವ ಜೋಡಿಗೆ ವಿವರಣೆ ನೀಡುತ್ತಾರೆ. ನಂತರ ಹುಡುಗನ ಬಳಿ ನಿನಗೆ ಈ ಮದುವೆ ಒಪ್ಪಿಗೆಯಾ ಎಂದು ಕೇಳಿದಾಗ ಆತ ‘ಹೌದು’ ಅಂತಾನೆ. ನಂತರ ಹುಡುಗಿ ಬಳಿ ಕೇಳಿದಾಗ ಆಕೆ ಏನೂ ಹೇಳದೆ ಮೌನವಹಿಸುತ್ತಾಳೆ, ಮತ್ತೆ ಕೇಳಿದಾಗ ‘ಇಲ್ಲ, ನನಗೆ ಅವನ ಮದುವೆಯಾಗಲು ಇಷ್ಟವಿಲ್ಲ’ ಎಂದು ಹೇಳುತ್ತಾಳೆ.

ನಂತರ ತನ್ನ ತಲೆಯಲ್ಲಿದ್ದ ವೇಲ್‌ ತೆಗೆದು ಮದುಮಗನ ಕೈಯಲ್ಲಿ ಕೊಟ್ಟು ತನ್ನ ಪ್ರೇಮಿ ಜತೆ ಹೋಗುವುದಾಗಿ ಹೇಳಿ ಅಲ್ಲೇ ಜನರ ನಡುವೆ ಇದ್ದ ತನ್ನ ಪ್ರೇಮಿಯ ಕೈ ಹಿಡಿದು ನಡದೇ ಬಿಡುತ್ತಾಳೆ.

‘ನಿಮ್ಮ ಮಗಳ ಪ್ರೀತಿ-ಪ್ರೇಮದ ಬಗ್ಗೆ ಗೊತ್ತಿರಲಿಲ್ಲವೇ, ಮತ್ಯಾಕೆ ಮದುವೆ ಫಿಕ್ಸ್ ಮಾಡಿದಿರಿ’ ಎಂದು ಹುಡುಗ ಮತ್ತು ಆತನ ಮನೆಯವರು ಕೈ ಕೊಟ್ಟು ಹೋದವಳ ಪೋಷಕರನ್ನು ತರಾಟೆಗೆ ತೆಗೆದುಕೊಂಡರು.

Comments are closed.