
ರಾಜ್ಸಮಂಡ್: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಯುವಕನೊಬ್ಬನನ್ನು ಬರ್ಬರವಾಗಿ ಕೊಡಲಿಯಿಂದ ಕೊಚ್ಚಿ, ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಈ ಭಯಾನಕ ವಿಡಿಯೋ ವೈರಲ್ ಆಗಿದ್ದು, ರಾಜಸ್ಥಾನ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಲವ್ ಜಿಹಾದ್ ಮಾಡುತ್ತಿದ್ದಾನೆ ಎನ್ನುವ ಆರೋಪದಲ್ಲಿ ಶಂಭು ಲಾಲ್ ಎಂಬಾತ ಬರ್ಬರವಾಗಿ ಕೊಚ್ಚಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಘಟನೆಯ ವಿಡಿಯೋವನ್ನು ಸ್ವಯಂ ಆರೋಪಿಯೇ ಚಿತ್ರೀಕರಿಸಿ ‘ಜಿಹಾದಿಗಳಿಗೆ ಇದೆ ಶಾಸ್ತಿ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾನೆ.
ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹತ್ಯೆಗೀಡಾದ ಯುವಕ ಅಫ್ರಾಜುಲ್ ಎಂದು ತಿಳಿದು ಬಂದಿದ್ದು, ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬಂದಿದ್ದ ವಲಸಿಗ ಎನ್ನಲಾಗಿದೆ.
ಗುರುವಾರ ರಾಜಸ್ಥಾನ ಸರ್ಕಾರ ಈ ಬಗ್ಗೆ ವಿಶೇಷ ತನಿಖಾ ದಳವನ್ನು ರಚಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ದಾಳಿ ವೇಳೆ ಅಫ್ರಾಜುಲ್ ಪ್ರಾಣ ಉಳಿಸಲು ಆರ್ತನಾದ ಮಾಡುತ್ತಿರುವುದು ಕಂಡು ಬಂದಿದ್ದು, ಮೃಗೀಯವಾಗಿ ಶಂಭು ಕೊಚ್ಚಿ ಕೊಲೆಗೈದು ಅಟ್ಟಹಾಸ ಮೆರೆದಿದ್ದಾನೆ.
ಘಟನೆಯ ಬಳಿಕ ರಾಜ್ ಸಮಂಡ್ ನಲ್ಲಿ ವ್ಯಾಪಕ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
-ಉದಯವಾಣಿ
Comments are closed.