
ಹೊಸದಿಲ್ಲಿ: ಬ್ಯಾಂಕ್ಗಳು ಆರ್ಥಿಕ ಸಂಕಷ್ಟಕ್ಕೀಡಾದರೆ ಅದನ್ನು ತುಂಬಿಕೊಳ್ಳಲು ಠೇವಣಿದಾರರ ಠೇವಣಿಯ ಒಂದು ಭಾಗ ಬಳಸಿಕೊಳ್ಳಲು ಅನುವು ಮಾಡುವ ಪ್ರಸ್ತಾವನೆ ಇದೀಗ ವಿವಾದಕ್ಕೀಡಾಗಿದ್ದು, ಮರುಪರಿಶೀಲನೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ನಿಯಮವನ್ನು 2008ರ ವೇಳೆ ಐರೋಪ್ಯ ಒಕ್ಕೂಟದ ಆರ್ಥಿಕ ವ್ಯವಸ್ಥೆ ಕುಸಿದಾಗ ಪರಿಚಯಿಸಲಾಗಿತ್ತು. ಆದರೆ ಭಾರತದಲ್ಲಿ ಈಗ ಇದನ್ನು ಹಣಕಾಸು ನಿಲುವಳಿ ಮತ್ತು ಠೇವಣಿ ವಿಮೆ ಮಸೂದೆ (ಎಫ್ಆರ್ಡಿಐ) ಅಡಿ ಪ್ರಸ್ತಾಪಿಸ ಲಾಗಿದೆ. ಆದರೆ ಈ ಮಸೂದೆಯನ್ನು ಸಂಸದೀಯ ಸಮಿತಿಗೆ ವರ್ಗಾಯಿಸಲಾಗಿದ್ದು, ಈ ಸೌಲಭ್ಯದ ಬಗ್ಗೆ ಮರುಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.
ಏನಿದು ಮಸೂದೆ?: ಸದ್ಯ 1 ಲಕ್ಷ ರೂ.ವರೆಗಿನ ಬ್ಯಾಂಕ್ ಠೇವಣಿಗೆ ವಿಮೆ ಇರುತ್ತದೆ. ಬ್ಯಾಂಕ್ ನಷ್ಟಕ್ಕೀಡಾದರೆ ವಿಮೆಯಿಂದಾಗಿ ಠೇವಣಿದಾರರಿಗೆ ಹಣ ಹಿಂಪಡೆಯುವುದು ಸಮಸ್ಯೆ ಆಗುವುದಿಲ್ಲ. ಬ್ಯಾಂಕ್ಗೂ ಮರುಪಾವತಿಯ ಹೊರೆ ಇರುವುದಿಲ್ಲ. ಆದರೆ ಹೊಸ ಶಿಫಾರಸಿನಲ್ಲಿ, ಹೊರೆ ಕಡಿಮೆ ಮಾಡಿಕೊಳ್ಳಲು ಬಳಸಬಹುದಾದ ಠೇವಣಿ ಮಿತಿ ನಿಗದಿಪಡಿಸಿಲ್ಲ. ಇದರಿಂದಾಗಿ ಎಲ್ಲ ಠೇವಣಿಗಳನ್ನೂ ಬ್ಯಾಂಕ್ ಬಳಸಿಕೊಳ್ಳಬಹುದಾಗಿದ್ದು, 1 ಲಕ್ಷಕ್ಕಿಂತ ಹೆಚ್ಚು ಠೇವಣಿಗೆ ವಿಮೆ ಇರುವುದಿಲ್ಲವಾದ್ದರಿಂದ ಗ್ರಾಹಕರಿಗೆ ಮರುಪಾವತಿ ಅಸಾಧ್ಯ. ಇದಕ್ಕೆ ಬ್ಯಾಂಕಿಂಗ್ ವಲಯದಿಂದ ಆಕ್ಷೇಪ ವ್ಯಕ್ತವಾಗಿದ್ದು, ಸರಕಾರ ಮರುಪರಿಶೀಲನೆಗೆ ಮುಂದಾಗಿದೆ.
-ಉದಯವಾಣಿ
Comments are closed.