ರಾಷ್ಟ್ರೀಯ

ಮಾನುಷಿಗೆ ವಿರಾಟ್ ಅಂದ್ರೆ ಇಷ್ಟ, ಫೇವರಿಟ್!

Pinterest LinkedIn Tumblr


ಹೊಸದಿಲ್ಲಿ: ಇದೀಗಷ್ಟೇ ಮಿಸ್ ವರ್ಲ್ಡ್ 2017 ಮಾನುಷಿ ಚಿಲ್ಲರ್ ಅವರಿಗೆ ‘ವಿಶೇಷ ಸಾಧನೆಗಾಗಿ ವರ್ಷದ ಭಾರತೀಯ ಪ್ರಶಸ್ತಿ’ ನೀಡಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಗೌರವಿಸಿದ್ದರು.

ಈ ನಡುವೆ ಪ್ರತಿಕ್ರಿಯಿಸಿರುವ ಮಾನುಷಿ, ನನಗೆ ವಿರಾಟ್ ಅಂದ್ರೆ ಇಷ್ಟ, ಅಷ್ಟೇ ಯಾಕೆ ತನ್ನ ಫೇವರಿಟ್ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಾಯಕ ಕೋಹ್ಲಿ ಅವರಲ್ಲಿ ಪ್ರಶ್ನೆಯೊಂದನ್ನು ಕೇಳುವ ಮೂಲಕ ಕುತೂಹಲ ಮುಟ್ಟಿಸಿದ್ದಾರೆ.

ನೀವೀಗ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದು, ಎಲ್ಲರಿಗೂ ಪ್ರಮುಖವಾಗಿಯೂ ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದೀರಿ. ನೀವಿದನ್ನು ಸಮಾಜಕ್ಕೆ ಹಿಂತಿರುಗಿಸುತ್ತಿದ್ದೀರಿ. ಆದರೆ ಕ್ರಿಕೆಟ್ ಜಗತ್ತಿಗೆ ವಿಶೇಷಯವಾಗಿಯೂ ಮಕ್ಕಳಿಗೆ ಹಿಂತಿರುಗಿಸುವುದು ಹೇಗೆ ಎಂದು ಕೇಳಿದರು.

ಇದಕ್ಕುತ್ತರವಾಗಿ ಕೋಹ್ಲಿ, ಕ್ರಿಕೆಟ್‌ನಲ್ಲಿ ತಮ್ಮ ಅಭಿವೃದ್ದಿ ಬಗ್ಗೆ ಮಾತನಾಡಿದರು. ನೀವೇನು ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ನಾನು ನಾನಗಿಯೇ ಇರಲು ಯತ್ನಿಸಿದ್ದೆ ಎಂದು ಉತ್ತರಿಸಿದರು.

ಯಾವತ್ತೂ ವ್ಯಕ್ತಿತ್ವವನ್ನು ಕಳೆದುಕೊಳ್ಳಬಾರದು. ಪಕ್ವತೆ ಬಂದ ಮೇಲೆ ಬದಲಾವಣೆಯಾಗಿದೆ. ನೀವು ಬೇರೊಬ್ಬರಂತೆ ಇರಲು ಪ್ರಯತ್ನಿಸಿದರೆ ಜೀವನದಲ್ಲಿ ಎಂದಿಗೂ ಯಶ ಸಾಧಿಸಲಾರದು ಮತ್ತು ಇತರರಿಗೂ ಎಂದಿಗೂ ಸ್ಫೂರ್ತಿ ತುಂಬಲು ಸಾಧ್ಯವಿಲ್ಲ ಎಂದರು.

ಎಲ್ಲದಕ್ಕೂ ಯೋಜನೆ ಅತಿ ಮುಖ್ಯ. ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಕಠಿಣ ಪರಿಶ್ರಮ ಬೇಕು. ಯಾಕೆಂದರೆ ಪ್ರತಿ ಬಾರಿಯೂ ಅಲ್ಲಿ ಹೋಗಿ ರನ್ ಗಳಿಸಲು ಅಥವಾ ವಿಕೆಟ್ ಕೀಳಲು ಸಾಧ್ಯವಿಲ್ಲ. ನಮ್ಮ ಕಾಯಕದತ್ತ ಪ್ರಯಾಣಿಕವಾದ ಪರಿಶ್ರಮ ಬೇಕು ಎಂದು ಕೋಹ್ಲಿ ವಿವರಿಸಿದರು.

Comments are closed.