ರಾಷ್ಟ್ರೀಯ

ಕಲಾವಿದನ ಕೈ ಚಳಕಕ್ಕೆ ಮನಸೋತ ಮೋದಿ

Pinterest LinkedIn Tumblr


ಅಹಮದಾಬಾದ್‌: ಸಾರ್ವಜನಿಕರು ತೋರುವ ಸಣ್ಣಪುಟ್ಟ ಕಾಳಜಿಗಳು, ಕಳಕಳಿ, ಕರೆ, ಸ್ಪಂದನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಸ್ಪಂದನೆ ಮಾಡುವುದನ್ನು ಈಗಾಗಲೇ ನಾವು ನೋಡಿದ್ದೇವೆ. ಈಗ ಮತ್ತೊಮ್ಮೆ ಇದನ್ನು ಸಾಬೀತು ಪಡಿಸಿದ್ದಾರೆ.

ಗುಜರಾತ್‌ನ ಕಲಾವಿದನೊಬ್ಬ ಮಾಡಿದ ಪೆನ್ಸಿಲ್‌ ಕಲಾಕೃತಿಗೆ ಫಿದಾ ಆಗಿರುವ ಪ್ರಧಾನಿ ಮೋದಿ ಖುದ್ದಾಗಿ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.

ಗುಜರಾತ್‌ನ ಮನೋಜ್‌ ಸೋನಿ ಎಂಬ ಕಲಾವಿದ ಪೆನ್ಸಿಲ್‌ ಮೂಲಕ 80 ಅಡಿ ಉದ್ದದ ಮೋದಿ ಚಿತ್ರವನ್ನು ರಚಿಸಿದ್ದಾರೆ.

ಸುಮಾರು ಏಳು ಗಂಟೆಗಳ ಕಾಲ ಸಮಯ ವ್ಯಯಿಸಿ ಮನೋಜ್‌ ಅವರು ಮೋದಿ ಕಲಾಕೃತಿಯನ್ನು ಚಿತ್ರಿಸಿದ್ದಾರೆ.

ಈ ಕಲಾಕೃತಿ ರಚಿಸುವುದು ನಿಜಕ್ಕೂ ಕಷ್ಟವಾಗಿತ್ತು. ಕಲಾಕೃತಿ ರಚಿಸಿ ದಾಖಲೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇ. ನಂತರ ಮೋದಿ ಕಲಾಕೃತಿಯನ್ನು ರಚಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ ಮನೋಜ್‌.

ಇದನ್ನು ಕಂಡು ಮನಸೋತ ಮೋದಿ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಪ್ರಧಾನಿ ಕಾರ್ಯಾಲಯದಿಂದ ಮನೋಜ್‌ಗೆ ಕರೆ ಮಾಡಲಾಯಿತು. ಆಗ ಖುದ್ದಾಗಿ ಮೋದಿ ಅವರೇ ಮನೋಜ್‌ ಜತೆ ಕೆಲವು ನಿಮಿಷ ಮಾತುಕತೆ ನಡೆಸಿ ಕಲಾಕೃತಿ ಅದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಡಿಸೆಂಬರ್‌ ಕೊನೆಯ ವಾರದಲ್ಲಿ ಹೊಸದಿಲ್ಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿ ಈ ಕಲಾಕೃತಿ ಕೊಡುವ ಪ್ಲಾನ್‌ ಕೂಡ ಹೊಂದಿದ್ದಾರೆ.

ಕಳೆದ ಹನ್ನೆರಡು ವರ್ಷದಿಂದಲೂ ಮನೋಜ್‌ ಸೋನಿ ಕಲಾವಿದನಾಗಿ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಹೃತಿಕ್‌ ರೋಷನ್‌ ಕಲಾಕೃತಿ ರಚಿಸಿದಾಗಲೂ ಮನೋಜ್‌ಗೆ ಭಾರತಿ ಮೆಚ್ಚುಗೆ ವ್ಯಕ್ತವಾಗಿತ್ತು.

Comments are closed.