ರಾಷ್ಟ್ರೀಯ

ಪ್ರೀತಿಸಿ ಓಡಿಹೋಗಿದ್ದಕ್ಕೆ ತಂದೆ, ಸೋದರನಿಂದಲೇ ಅತ್ಯಾಚಾರ

Pinterest LinkedIn Tumblr

ಮೀರತ್‌: ಪ್ರೇಮಿ ಜತೆ ಓಡಿ ಹೋಗಿದ್ದಕ್ಕಾಗಿ ಯುವತಿಯೊಬ್ಬಳ ಮೇಲೆ ಆಕೆಯ ತಂದೆ, ಸೋದರ ಮತ್ತು ಇಬ್ಬರು ಸಂಬಂಧಿಗಳೇ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‌ ಸಮೀಪ ನಡೆದಿದೆ.

21 ವರ್ಷದ ಯುವತಿ, 32 ವರ್ಷದ ಮೂರು ಮಕ್ಕಳ ತಂದೆಯೊಂದಿಗೆ ಜುಲೈ ಮತ್ತು ಅಕ್ಟೋಬರ್‌ನಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದಳು. ಎರಡನೇ ಬಾರಿ ಅಪಹರಣ ಪ್ರಕರಣ ದಾಖಲಾದಾಗ ಯುವತಿ ಕೋರ್ಟ್‌ಗೆ ಹಾಜರಾಗಿ ಮನೆಯವರ ಮೇಲೆಯೇ ಅತ್ಯಾಚಾರದ ಆರೋಪ ಮಾಡಿದ್ದಾಳೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆಕೆ ತಮ್ಮ ಮೇಲಿನ ದ್ವೇಷದಿಂದ ಈ ಆರೋಪ ಮಾಡಿದ್ದಾಳೆ ಎಂದು ಬಂಧಿತರು ಆರೋಪಿಸಿದ್ದಾರೆ.

Comments are closed.