ರಾಷ್ಟ್ರೀಯ

ದಿಲ್ಲಿಯಲ್ಲಿ ದಿನಕ್ಕೆ 11 ಮಹಿಳೆಯರು ಕಾಣೆಯಾಗುತ್ತಾರೆ: ಆರ್‌ಟಿಐ

Pinterest LinkedIn Tumblr


ಹೊಸದಿಲ್ಲಿ: ಕಳೆದ ವರ್ಷ ಕೇವಲ ದಿಲ್ಲಿ ನಗರವೊಂದರಲ್ಲೇ ದಿನಕ್ಕೆ 11 ಮಹಿಳೆಯರ ಅಪಹರಣ ಅಥವಾ ಕಾಣೆಯಾಗುವ ಪ್ರಕರಣ ದಾಖಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸುವಂತೆದೆ.

ಪ್ರಜಾ ಫೌಂಡೇಶನ್‌ ನೀಡಿರುವ ಮಾಹಿತಿಗಳ ಪ್ರಕಾರ, 2016ರಲ್ಲಿ ದಿಲ್ಲಿಯಲ್ಲಿ ದಾಖಲಾಯಾಗಿರುವ ಅಪಹರಣ ಮತ್ತು ನಾಪತ್ತೆ ಪ್ರಕರಣದಲ್ಲಿ ಶೇ50ಕ್ಕೂ ಅಧಿಕ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿದ್ದೇ ಆಗಿದ್ದು, ಒಟ್ಟಾರೆ ದಾಖಲಾಗಿದ್ದ 6707 ಅಪಹರಣ ಪ್ರಕರಣದಲ್ಲಿ 4,101 ಪ್ರಕರಣಗಳಲ್ಲಿ ಮಹಿಳೆಯರೇ ಸಂತ್ರಸ್ಥರಾಗಿದ್ದಾರೆ.

‘ಕಳೆದ ವರ್ಷ 699 ಅಪಹರಣ ಪ್ರಕರಣ ದಾಖಲಾಗಿತ್ತು, ಇದರಲ್ಲಿ 524 ಪ್ರಕರದಲ್ಲಿ ಮಹಿಳೆಯರೇ ಬಲಿಪಶುಗಳಾಗಿದ್ದಾರೆ, ಶೇ.75 ಪ್ರಕರಣಗಳನ್ನು ಮಹಿಳೆಯರಿಗೆ ಸಂಬಂಧಿಸಿದ್ದೇ ಆಗಿವೆ’ ಎಂದು ಎನ್‌ಜಿಒ ಹೇಳಿಕೊಂಡಿದ್ದೆ.

2015ರಲ್ಲಿ ದಿಲ್ಲಿಯಲ್ಲಿ 7937 ಅಪಹರಣ ಪ್ರಕರಣ ದಾಖಲಾಗಿತ್ತು, ಇದರಲ್ಲಿ 792 ಪ್ರಕರಣ ಮಹಿಳೆಯರಿಗೇ ಸಂಬಂಧಿಸಿದ್ದು, ಆದರೆ ಕಳೆದ ವರ್ಷ ಅಪಹರಣ ಪ್ರಕರಣ ದಾಖಲೆ ಕಡಿಮೆಯಾಗಿದ್ದರೂ ಮಹಿಳೆಯರ ಅಪಹರಣ ವಿಚಾರದಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ ಎಂದು ಎನ್‌ಜಿಒ ಹೇಳಿದೆ.

Comments are closed.