ರಾಷ್ಟ್ರೀಯ

ಲಿಂಗ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ ಮಹಿಳಾ ಪೊಲೀಸ್ ಪೇದೆ

Pinterest LinkedIn Tumblr


ಬೀಢ್,: ಬಹುಶಃ ಭಾರತೀಯ ಪೋಲಿಸ್ ಪಡೆಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಬೆಳವಣಿಗೆ ಕಂಡುಬಂದಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಹಿಳಾ ಪೇದೆ ಲಿಂಗ ಬದಲಾವಣೆಗೆ ಒಳಗಾಗಲು ಮತ್ತು ಇಲಾಖೆಯಲ್ಲಿಯೇ ಮುಂದುವರಿಯುವಂತೆ ಕೋರಿ ಮುಂಬೈ ಹೈಕೋರ್ಟ್‌ ಮೊರೆಹೋಗಿದ್ದಾಳೆ.

29 ವರ್ಷ ವಯಸ್ಸಿನ ಲಲಿತಾ ಕುಮಾರ್ ಸಾಳ್ವೆ ಈಗ ಮರಾಠವಾಡಾ ಪ್ರದೇಶದ ಬೀಡ್ ಜಿಲ್ಲೆಯ ಮಜಲ್‌ಗಾಂವ್ ಪಟ್ಟಣದಲ್ಲಿ ವಾಸವಾಗಿದ್ದಾರೆ.

“ನಾನು ನನ್ನ ಪೋಷಕರ ಸಂಪೂರ್ಣ ಬೆಂಬಲವನ್ನು ಹೊಂದಿದ್ದೇನೆ, ಕುಟುಂಬದಲ್ಲಿ ಲಿಂಗ ಬದಲಾವಣೆಗೆ ಯಾರದೇ ವಿರೋಧವಿಲ್ಲ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಲೈಂಗಿಕ ಬದಲಾವಣೆಗೆ ಒಳಗಾಗಲು ಅನುಮತಿ ನೀಡುವಂತೆ ಆದೇಶ ನೀಡಿದ್ದಾರೆ.

ಇದಕ್ಕಿಂತ ಮೊದಲು, ಮಹಿಳಾ ಪೊಲೀಸ್ ಪೇದೆ ಲಿಂಗ ಶಸ್ತ್ರಚಿಕಿತ್ಸೆ ಕೋರಿ, ಡಿಜಿಪಿ ಸತೀಶ್ ಮಾಥುರ್, ಐಜಿಪಿ ಮಿಲಿಂದ್ ಭಾರಂಬೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಶ್ರೀಧರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ಮಹಿಳಾ ಪೊಲೀಸ್ ಪೇದೆಯ ಲಿಂಗ ಬದಲಾವಣೆಗೆಗಾಗಿ ಕೆಲ ತಾಂತ್ರಿಕ ಮತ್ತು ಕಾನೂನು ತೊಡಕುಗಳಿದ್ದು, ಶೀಘ್ರದಲ್ಲಿಯೇ ಇತ್ಯರ್ಥವಾಗುವ ವಿಶ್ವಾಸವಿದೆ. ಪೇದೆಯ ಮನವಿಯನ್ನು ಪುರಸ್ಕರಿಸುವಂತೆ ಡಿಜಿಪಿ ಮಾಥುರ್ ಅವರಿಗೆ ತಿಳಿಸಿದ್ದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

Comments are closed.