ರಾಷ್ಟ್ರೀಯ

ಅಸಭ್ಯ ವರ್ತನೆ ತೋರಿದ ಕುಡುಕ ಪ್ರಯಾಣಿಕ ವಿಮಾನದ ಮಹಿಳಾ ಸಿಬ್ಬಂದಿ ಕಾಲಿಗೆ ಬಿದ್ದ ವಿಡಿಯೋ ವೈರಲ್

Pinterest LinkedIn Tumblr

ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಆರ್ಜಿಐಎ)ದಲ್ಲಿ ವಿಮಾನ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರ ವಿರುದ್ಧ ಸೈಬರಾಬಾದ್ ಪೊಲೀಸರು ಕ್ಷುಲ್ಲಕ ಪ್ರಕರಣವನ್ನು ದಾಖಲಿಸಿದ್ದಾರೆ.

ಇಬ್ಬರು ಪ್ರಯಾಣಿಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಆರೋಪಿಯೊಬ್ಬ ಆಕೆಯ ಕಾಲಿಗೆ ಬೀಳುತ್ತಿದ್ದು ತನ್ನ ವಿರುದ್ಧ ದೂರು ನೀಡದಂತೆ ಮನವಿ ಮಾಡುತ್ತಿರುವುದನ್ನು ಮೊಬೈನಲ್ಲಿ ಚಿತ್ರೀಕರಿಸಿಕೊಳ್ಳಲಾಗಿತ್ತು. ಈ ವಿಡಿಯೋ ವೈರಲ್ ಆಗಿತ್ತು. ಮಹಿಳಾ ಸಿಬ್ಬಂದಿ ದೂರಿನ ನಂತರ ಈ ಘಟನೆಯ ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಡಿದ ಮತ್ತಿನಲ್ಲಿ ಇಬ್ಬರು ಪ್ರಯಾಣಿಕರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವಿಮಾನ ನಿಲ್ದಾಣದ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಔಟ್ ಪೋಸ್ಟ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ವಿಡಿಯೋದಲ್ಲಿ ಮಹಿಳಾ ಸಿಬ್ಬಂದಿ ಕಿರುಕುಳ ನೀಡಿದ ಆರೋಪಿಗಳ ವಿರುದ್ಧ ಕೂಗಾಡುತ್ತಿರುವುದು. ತಮ್ಮ ತಪ್ಪನ್ನು ಮನ್ನಿಸಿ ದೂರು ನೀಡದಂತೆ ಮಹಿಳಾ ಸಿಬ್ಬಂದಿಗೆ ಆರೋಪಿಯೊಬ್ಬ ಕಾಲಿಗೆ ಬೀಳುತ್ತಿರುವ ದೃಶ್ಯಗಳು ಸೆರೆಯಾಗಿದೆ.

Comments are closed.