ಅಂತರಾಷ್ಟ್ರೀಯ

ಚೀನಾ ಸೇನೆ ಸೇರಲಿದೆ ವಿಶ್ವದ ಯಾವುದೇ ಗುರಿ ಹೊಡೆದುರುಳಿಸಬಲ್ಲ ಹೊಸ ತಲೆ ಮಾರಿನ ಕ್ಷಿಪಣಿ!

Pinterest LinkedIn Tumblr

ಬೀಜಿಂಗ್‌: ಚೀನಾ ವಿಶ್ವದ ಯಾವುದೇ ಮೂಲೆಯ ಗುರಿಯನ್ನು ಹೊಡೆದುರುಳಿಸಬಲ್ಲ ಮುಂದಿನ ತಲೆಮಾರಿನ ಬಹು-ಪರಮಾಣು ಖಂಡಾಂತರ ಕ್ಷಿಪಣಿಯೊಂದನ್ನು ಸಿದ್ಧಪಡಿಸಿದ್ದು, ಅದು ಮುಂದಿನ ವರ್ಷ ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್ ಎ) ಸೇರಲಿದೆ.

ಚೀನಾ 2012ರಲ್ಲಿ ಈ ಹೊಸ ಕ್ಷಿಪಣಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಈಗ ಐದು ವರ್ಷಗಳ ನಂತರ ಡಾಂಗ್‌ಫೆಂಗ್‌-41 ಎಂಬ ಕ್ಷಿಪಣಿ ಸಿದ್ಧಗೊಂಡಿದ್ದು, ಮುಂದಿನ ವರ್ಷದಲ್ಲಿ ಚೀನಾ ಸೇನೆಗೆ ಹಸ್ತಾಂತರಿಸಲಾಗುತ್ತದೆ.

ಹೊಸ ವರ್ಷದ ಆರಂಭದಲ್ಲಿ ಈ ಕ್ಷಿಪಣಿ ಚೀನಾ ಸೇನೆಗೆ ಸೇರಲಿದ್ದು, 10 ಅಣ್ವಸ್ತ್ರ ಸಿಡಿತಲೆಗಳನ್ನು ಏಕಕಾಲಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಈ ಹೊಸ ತಲೆ ಮಾರಿನ ಕ್ಷಿಪಣಿಯನ್ನು ಈಗಾಗಲೇ ಹಲವಾರು ಬಾರಿ ಪರೀಕ್ಷೆಗೊಳಪಡಿಸಲಾಗಿದ್ದು, ಕಳೆದ ವಾರ 10ನೇ ಬಾರಿ ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

Comments are closed.