ರಾಷ್ಟ್ರೀಯ

ದಿನಕ್ಕೆ 50 ಸಾವಿರ ಭಕ್ತರಿಗೆ ಮಾತ್ರಾ ವೈಷ್ಣೋ ದೇವಿ ದರ್ಶನ!

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೋಮವಾರದಿಂದ ನೂತನ ಕ್ರಮವನ್ನು ಜಾರಿಗೆ ತಂದಿದ್ದು, ಒಂದು ದಿನಕ್ಕೆ 50 ಸಾವಿರಕ್ಕಿಂತ ಅಧಿಕ ಭಕ್ತರನ್ನು ದೇವಿಯ ದರ್ಶನಕ್ಕೆ ಅನುಮತಿಸದಂತೆ ಆದೇಶಿಸಿದೆ.

ವೈಷ್ಣೋ ದೇವಿ ಸನ್ನಿದಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಮಂಡಳಿ ಈ ನಿರ್ಧಾರ ಕೈಗೊಂಡಿದೆ. ಒಂದು ವೇಳೆ 50 ಸಾವಿರಕ್ಕೂ ಹೆಚ್ಚು ಭಕ್ತರು ಸ್ಥಳಕ್ಕೆ ಬಂದಲ್ಲಿ ಅವರನ್ನು ಅರ್ಧ್‌ಕುಮವಾರಿ ಅಥವಾ ಕತ್ರಾದಲ್ಲಿ ತಡೆಯುವಂತೆ ಎನ್‌ಜಿಟಿ ಸೂಚನೆ ನೀಡಿದೆ.

ವೈಷ್ಣೋ ದೇವಿ ದರ್ಶನಕ್ಕೆಂದೇ ನೂತನವಾಗಿ ನಿರ್ಮಿಸಲಾಗಿರುವ ರಸ್ತೆ ಮತ್ತು ಬ್ಯಾಟರಿ ಚಾಲಿತ ಕಾರುಗಳ ಸೇವೆಯನ್ನು ಇದೇ ತಿಂಗಳ 24ರಿಂದ ಆರಂಭಿಸಲಾಗುತ್ತದೆ. ಆದರೆ, ಈ ರಸ್ತೆಯಲ್ಲಿ ಕುದುರೆಗಾಡಿ ಅಥವಾ ಕತ್ತೆಗಾಡಿಗೆ ಅವಕಾಶವಿಲ್ಲ. ಅಲ್ಲದೇ ನೂತನ ರಸ್ತೆಯಲ್ಲಿ ಯಾರಾದರೂ ಶೌಚ ಮಾಡಿದರೆ ಅವರಿಗೆ ಎರಡು ಸಾವಿರದವರೆಗೂ ದಂಢ ವಿಧಿಸುವಂತೆ ಹಸಿರುವ ನ್ಯಾಯಪೀಠ ಆದೇಶ ನೀಡಿದೆ.

ವೈಷ್ಣೋ ದೇವಿ ದರ್ಶನಕ್ಕೆ ಅಥವಾ ವಸ್ತುಗಳ ಸಾಗಾಟಕ್ಕೆ ಕುದುರೆಗಾಡಿ, ಕತ್ತೆಗಾಡಿಯನ್ನು ಬಳಸುವುದನ್ನು ನಿಷೇಧಿಸುವಂತೆ ನ್ಯಾಯಮಂಡಳಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಪೀಠ ಈ ಆದೇಶ ಹೊರಹಾಕಿದೆ.

Comments are closed.