ರಾಷ್ಟ್ರೀಯ

ಕಾನ್ಪುರದಲ್ಲಿ ಅತ್ಯಾಚಾರಕ್ಕೆ ಯತ್ನ; ಚಲಿಸುತ್ತಿದ್ದ ರೈಲಿನಿಂದ ಜಿಗಿದ ತಾಯಿ-ಮಗಳು

Pinterest LinkedIn Tumblr

ಕಾನ್ಪುರ: ಮಗಳ ಮೇಲೆ ಅತ್ಯಾಚಾರ ಪ್ರಯತ್ನ ನಡೆಯುತ್ತಿರುವುದನ್ನು ಕಂಡ ತಾಯಿ ತನ್ನ ಮಗಳೊಡನೆ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪಾರಾದ ಘಟನೆ ಇಂದು ಕಾನ್ಪುರ ಸಮೀಪ ನಡೆದಿದೆ.

ಕೋಲ್ಕತ್ತಾದಿಂದ ದೆಹಲಿಗೆ ಹೊರಟಿದ್ದ ಹೌರಾ-ಜೋಧ್ ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಬವಿಸಿದ್ದು ರೈಲಿನಲ್ಲಿದ್ದ ಒಂದು ಕಾಮುಕರ ಗುಂಪು 15 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದ ತಾಯಿ ಮಗಳನ್ನೂ ಕರೆದುಕೊಂಡು ರೈಲಿನಿಂದ ಹೊರ ಜಿಗಿದಿದ್ದಾರೆ. ಚಂದಾರಿ ಹಾಗೂ ಕಾನ್ಪುರ ರೈಲು ನಿಲ್ದಾಣದ ಮಧ್ಯ ಜಾಗದಲ್ಲಿ ರೈಲು ಚಲಿಸುತ್ತಿದ್ದ ವೇಳೆ ಮಗಳನ್ನು ರೈಲಿನ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರಾಕ್ಕೆ ಯತ್ನ ನಡೆಸಿದ ಗುಂಪನ್ನು ಗಮನಿಸಿದ 40 ವರ್ಷದ ತಾಯಿ ಮಗಳೊಡನೆ ರೈಲಿನಿಂದ ಹೊರಕ್ಕೆ ಜಿಗಿದಿದ್ದಾರೆ.

ಆ ಬಳಿಕ ಇಬ್ಬರೂ ಪ್ರಜ್ಞಾಹೀನ ರಾಗಿದ್ದು ಸುಮಾರು ಎರಡು ಗಂಟೆಗಳ ನಂತರ ಚಂದಾರಿ ರೈಲ್ವೆ ನಿಲ್ದಾಣ ತಲುಪಿದ್ದರು. ಅಲ್ಲಿಂದ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದ ಅವರನ್ನು ಚಿಕಿತ್ಸೆಗಾಗಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಪತಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ಮಗಳು ಕೋಲ್ಕತ್ತಾದಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದಳು. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ರೈಲ್ವೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.