ಕೋಟ, ರಾಜಸ್ಥಾನ : ಖಾಸಗಿ ಭದ್ರತಾ ಸಂಸ್ಥೆಯ ಮಾಲಕನಿಂದ 25,000 ರೂ. ಲಂಚ ತೆಗೆದುಕೊಂಡ ಆರೋಪದ ಮೇಲೆ ಭವಿಷ್ಯ ನಿಧಿ ಇಲಾಖೆಯ ಇಬ್ಬರು ಜಾರಿ ಅಧಿಕಾರಿ (ಇನ್ಸ್‌ಪೆಕ್ಟರ್) ಗಳನ್ನು ಭ್ರಷ್ಟಾಚಾರ ನಿಗ್ರಹ ದಳದವರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಂಧಿತರನ್ನು ನಳಿನ್ ಕುಮಾರ್ ಭಟ್ ಮತ್ತು ಸುರೇಶ್ ಸೈನಿ ಎಂದು ಗುರುತಿಸಲಾಗಿದೆ. ಇವರ ನಗರದ ಕಾನ್‌ಸುವಾ ಪ್ರದೇಶದಲ್ಲಿ ಖಾಸಗಿ ಭದ್ರತಾ ಸಂಸ್ಥೆ ನಡೆಸುತ್ತಿರುವ ಗೋಬ್ರಿ ಲಾಲ್ ಎಂಬವರಿಂದ 25,000 ರೂ. ಲಂಚ ತೆಗೆದುಕೊಳ್ಳುವಾಗ ಬಂಧಿಸಲ್ಪಟ್ಟರು ಎಂದು ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ (ಎಸಿಬಿ) ಚಂದ್ರಶೀಲ್ ಠಾಕೂರ್ ತಿಳಿಸಿದ್ದಾರೆ.
ಬಂಧಿತ ಅಧಿಕಾರಿಗಳನ್ನು ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದಿರುವ ಠಾಕೂರ್, ಆರೋಪಿಗಳ ನ್ಯಾಯಾಂಗ ಕಸ್ಟಡಿಯನ್ನು ಕೇಳಲಾಗುವುದು ಎಂದು ಹೇಳಿದರು.
-ಉದಯವಾಣಿ