ರಾಷ್ಟ್ರೀಯ

ಪೂರ್ವಜನ್ಮದ ಪತ್ನಿಯೆನ್ನುತ್ತಾ ರೇಪ್‌ ಮಾಡುವ ದೇವಮಾನವ

Pinterest LinkedIn Tumblr


ಥಾಣೆ: ಗುವಾಹಟಿಯ ಸ್ವಯಂಘೋಷಿತ ದೇವಮಾನವನೊಬ್ಬ ತನ್ನ ಪೂರ್ವಜನ್ಮದ ಪತ್ನಿ ಎಂದು ಹೇಳಿಕೊಂಡು ಮಹಿಳೆಯ ಮೇಲೆ ಅತ್ಯಾಚಾರ ನಡೆಸುವ ಜತೆಗೆ ತಾನು ಕ್ಯಾನ್ಸರ್‌ ಗುಣಪಡಿಸುವ ಅತಿಮಾನುಷ ಶಕ್ತಿ ಹೊಂದಿರುವುದಾಗಿ ಹೇಳುತ್ತಾ ಜನರನ್ನು ವಂಚಿಸುತ್ತಿರುವುದಾಗಿ ಪ್ರಕರಣ ದಾಖಲಾಗಿದೆ.

ಥಾಣೆ ಸೆಷನ್ಸ್‌ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನದಿಂದ ವಿನಾಯಿತಿ ಕೋರಿ ಆರೋಪಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ. ಸೈಲಾಲ್‌ ಜೆದಿಯಾ ಎಂಬ ಸ್ವಯಂಘೋಷಿತ ದೇವಮಾನವನ ಕೈಲಿ ಸಿಲುಕಿ ಎರಡು ವರ್ಷ ಕಿರುಕುಳ ಅನುಭವಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರ ಮಹಿಳೆ ಖಾಸಗಿ ಕಂಪೆನಿಯಲ್ಲಿ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆ 2015 ತಂದೆಗೆ ಕ್ಯಾನ್ಸರ್‌ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣ ಜಾಲಾಡಿದ್ದರು. ಆಗ ಸಾಯಿಬಾಬಾನ ಅವತಾರವೆನ್ನುತ್ತಿದ್ದ ಆರೋಪಿಯ ಸಂಪರ್ಕ ಸಿಕ್ಕಿದೆ. ಆಕೆಯ ಕುಟುಂಬದಿಂದ ಕ್ಯಾನ್ಸರ್‌ ಗುಣಪಡಿಸುವ ವಿಧಿಗಳಿಗೆಂದು ಮೂರು ಲಕ್ಷ ರೂ. ಪಡೆದಿದ್ದ. ನೀನು ನನ್ನ ಪೂರ್ವಜನ್ಮದ ಹೆಂಡತಿ ಎಂದು ಮಹಿಳೆಯನ್ನು ನಂಬಿಸಿ ಆಗಾಗ ಅತ್ಯಾಚಾರ ನಡೆಸಿದ್ದ, ನಾನಾ ಕಡೆ ಸುತ್ತಾಡಿಸಿದ್ದ. ಅದಾದ ಬಳಿಕ ಆಕೆಯ ಪೋಟೊಗಳನ್ನು ಮುಂದಿಟ್ಟು ಬ್ಲ್ಯಾಕ್‌ ಮೇಲ್‌ ಮಾಡಲಾರಂಭಿಸಿದ್ದ ಎಂದು ಮಹಿಳೆಯ ಪರ ವಕೀಲರು ಕೋರ್ಟ್‌ಗೆ ವಿವರಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ನವೆಂಬರ್‌ ಒಂಬತ್ತಕ್ಕೆ ಮುಂದೂಡಿದೆ.

Comments are closed.