ರಾಷ್ಟ್ರೀಯ

ಹಿಂಬದಿ ಸವಾರರು ಹೆಲ್ಮೆಟ್ ಧರಿಸುವಂತೆ ಸಚಿನ್ ಮನವಿ

Pinterest LinkedIn Tumblr


ಹೊಸದಿಲ್ಲಿ: ಮೋಟಾರ್‌ಸೈಕಲ್‌ನಲ್ಲಿ ಸಂಚರಿಸುವ ಸಹ ಪ್ರಯಾಣಿಕರು ಸಹ ಹೆಲ್ಮೆಟ್ ಧರಿಸುವಂತೆ ಸವಾರರಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ವಿನಂತಿ ಮಾಡಿದ್ದಾರೆ.

ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲಿಕರಾಗಿರುವ ಸಚಿನ್, ಕೇರಳದಲ್ಲಿ ತಮ್ಮ ತಂಡದ ಪರ ಪ್ರಚಾರ ಕ್ರಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವಾಗ ಇಂತಹದೊಂದು ಸಂದೇಶ ನೀಡಿದ್ದಾರೆ.

ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಸದಾ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಚಿನ್, ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ರಸ್ತೆ ಸುರಕ್ಷತೆಗೆ ಸಂಬಂಧ ಮಹತ್ವದ ಪಾಠವನ್ನು ಹೇಳಿಕೊಟ್ಟಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾದರೂ ಯಾರೂ ಕೂಡಾ ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಅಪಘಾತ ಸಂಭವಿಸಿದಾಗ ಅತಿ ಹೆಚ್ಚು ಪ್ರಾಣಿ ಹಾನಿಯಾಗುವ ಅಥವಾ ತಲೆಗೆ ಪೆಟ್ಟಾಗುವ ಭೀತಿಯಿದೆ.

ಇನ್ನಾದರೂ ಕ್ರಿಕೆಟ್ ದೇವರ ಸಂದೇಶದಿಂದ ಪ್ರೇರಣೆ ಪಡೆದು ದ್ವಿಚಕ್ರ ವಾಹನ ಸವಾರರು ಸದಾ ಹೆಲ್ಮೆಟ್ ಧರಿಸಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ.

Comments are closed.