ರಾಷ್ಟ್ರೀಯ

ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ಏರಿಕೆ

Pinterest LinkedIn Tumblr

ನವದೆಹಲಿ: ಗ್ಯಾಸ್ ಸಬ್ಸಿಡಿ ಪೂರ್ಣವಾಗಿ ರದ್ದುಗೊಳಿಸುವ ತನ್ನ ಅಂತಿಮ ಗುರಿಯತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ಬರೋಬ್ಬರಿ 93 ರೂಪಾಯಿ ಏರಿಕೆ ಆಗಿದೆ. ನಿನ್ನೆ ಸಬ್ಸಿಡಿಸಹಿತ ಗ್ಯಾಸ್ ಸಿಲಿಂಡರ್ ಬಲೆ 4.60 ರೂ ಏರಿಕೆ ಮಾಡಲಾಗಿದೆ.

ಸಬ್ಸಿಡಿಸಹಿತ 14.2 ಕಿಲೋ ಎಲ್’ಪಿಜಿ ಸಿಲಿಂಡರ್’ನ ಬೆಲೆಯು ರಾಜಧಾನಿ ದೆಹಲಿಯಲ್ಲಿ ಈಗ 495.69 ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 486.50 ರೂ’ಗೆ ಏರಿಕೆಯಾಗಿದೆ.ಸಬ್ಸಿಡಿರಹಿತ ಸಿಲಿಂಡರ್’ಗಳ ಬೆಲೆ ದಿಲ್ಲಿಯಲ್ಲಿ 742 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಇದರ ಬೆಲೆ 744.50 ರೂಪಾಯಿ ಆಗಿದೆ.

ಭಾರತದಲ್ಲಿ ಎಲ್’ಪಿಜಿ ಗ್ಯಾಸ್’ಗೆ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರ ಸಂಖ್ಯೆ 18.11 ಕೋಟಿ ಇದೆ. ಸಬ್ಸಿಡಿ ಇಲ್ಲದ ಗ್ರಾಹಕರ ಪ್ರಮಾಣ 2.66 ಕೋಟಿ ಇದೆ. ಸಬ್ಸಿಡಿ ಮತ್ತು ನಾನ್-ಸಬ್ಸಿಡಿ ಬೆಲೆಗಳ ನಡುವಿನ ಅಂತರ ಈಗ ಇನ್ನಷ್ಟು ತಗ್ಗಿದೆ. 2018ರ ಮಾರ್ಚ್’ನಷ್ಟರಲ್ಲಿ ಎಲ್’ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ನಿಲ್ಲಿಸುವ ಗುರಿ ಕೇಂದ್ರ ಸರಕಾರದ್ದಾಗಿದೆ. ಸದ್ಯಕ್ಕೆ ಒಬ್ಬ ಎಲ್’ಪಿಜಿ ಗ್ರಾಹಕರಿಗೆ ಪ್ರತೀ ವರ್ಷ 14.2 ಕಿಲೋ ತೂಕದ 12 ಗ್ಯಾಸ್ ಸಿಲೆಂಡರ್’ಗಳನ್ನು ಸಬ್ಸಿಡಿ ದರದಲ್ಲಿ ಕೊಡಲಾಗುತ್ತದೆ. ಹೆಚ್ಚುವರಿ ಸಿಲಿಂಡರ್’ಗಳಿಗೆ ಸಬ್ಸಿಡಿರಹಿತ (ಕಮರ್ಷಿಯಲ್) ದರ ವಿಧಿಸಲಾಗುತ್ತಿದೆ.

Comments are closed.