ಕ್ರೀಡೆ

ಹಾಕಿ ಪಾಂದ್ಯಾವಳಿ -ಸೆಮಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

Pinterest LinkedIn Tumblr

ಹೊಸದಿಲ್ಲಿ, ನ.2: ಭಾರತದ ಮಹಿಳಾ ತಂಡ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಸೆಮಿ ಫೈನಲ್ಗೆ ತಲುಪಿದೆ.  ಜಪಾನ್ನ ಕಾಕಾಮಿಗಹರಾದಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಭಾರತ ತಂಡ ಕಝಕ್ಸ್ತಾನವನ್ನು 7-1 ಗೋಲುಗಳ ಅಂತರದಿಂದ ಮಣಿಸಿತು.

ಫಾರ್ಮ್ನಲ್ಲಿರುವ ಗುರ್ಜಿತ್ ಕೌರ್(4ನೆ, 42ನೆ, 56ನೆ ನಿಮಿಷ) ಮೂರು ಗೋಲುಗಳನ್ನು ಬಾರಿಸಿದರೆ, ದೀಪ್ ಗ್ರೆಸ್ ಎಕ್ಕಾ(16ನೆ,41ನೆ ನಿಮಿಷ) ಹಾಗೂ ನವನೀತ್ ಕೌರ್(22ನೆ,27ನೆ ನಿಮಿಷ) ತಲಾ ಎರಡು ಗೋಲುಗಳನ್ನು ಬಾರಿಸಿದ್ದಾರೆ.

ತ್ರಿವಳಿ ಗೋಲುಗಳನ್ನು ಬಾರಿಸಿರುವ ಗುರ್ಜಿತ್ ಸಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಒಟ್ಟು 6 ಗೋಲುಗಳನ್ನು ಬಾರಿಸುವ ಮೂಲಕ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ.

ಭಾರತ ಲೀಗ್ ಹಂತದಲ್ಲಿ ಸಿಂಗಾಪುರ ವಿರುದ್ಧ 10-0, ಚೀನಾ ವಿರುದ್ಧ 4-1 ಹಾಗೂ ಮಲೇಷ್ಯಾ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿ ಅಗ್ರ ಸ್ಥಾನ ಪಡೆದಿತ್ತು. ಭಾರತ ನ.3 ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಗೆಲುವು ಸಾಧಿಸುವ ಜಪಾನ್ ಅಥವಾ ಮಲೇಷ್ಯಾ ತಂಡವನ್ನು ಎದುರಿಸಲಿದೆ.

Comments are closed.