ರಾಷ್ಟ್ರೀಯ

ತಾರತಮ್ಯ ಮುಂದುವರಿದರೆ ಮತಾಂತರ: ಮಾಯಾವತಿ ಎಚ್ಚರಿಕೆ

Pinterest LinkedIn Tumblr


ಅಜಂಗಢ: ದಲಿತರು ಮತ್ತು ಬುಡಕಟ್ಟು ಜನರ ಬಗ್ಗೆ ತಾರತಮ್ಯದ ಆಚರಣೆ ಮುಂದುವರಿದಲ್ಲಿ ತಾವೂ ಸಹ ಸಂವಿಧಾನಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಅವರಂತೆ ಹಿಂದೂ ಧರ್ಮ ತೊರೆಯುವುದಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

ಅಜಂಗಢದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಅಂಬೇಡ್ಕರ್‌ ಅವರು ಕೆಲವೊಂದು ಕಾರಣಗಳಿಗಾಗಿ ರಾಜೀನಾಮೆ ನೀಡು ಅನಿವಾರ್ಯತೆಗೆ ಸಿಲುಕಿದರು. ಲೋಕಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ 1951ರಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಬಳಿಕ, ದಲಿತರ ವಿರುದ್ಧದ ತಾರತಮ್ಯ, ಅಸ್ಪೃಶ್ಯತೆಯಂತಹ ಆಚರಣೆಗಳನ್ನು ಕೈಬಿಡುವಂತೆ ಶಂಕರಾಚಾರ್ಯರು ಮತ್ತು ಇತರ ಹಿಂದೂ ಧಾರ್ಮಿಕ ಮುಖಂಡರಿಗೆ ಗಡುವು ನೀಡಿದರು. ಆದರೆ ಆಚಾರ್ಯರು ವಿಫಲರಾದಾಗ ಅಂಬೇಡ್ಕರ್‌ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು’ ಎಂದು ಮಾಯಾವತಿ ನುಡಿದರು.

‘ನಾನು ಹಿಂದೂ ಧರ್ಮವನ್ನು ಆ ಮಟ್ಟಿಗೆ ವಿರೋಧಿಸುವುದಿಲ್ಲ. ಆದರೆ ದಲಿತರು, ಬುಡಕಟ್ಟು ಜನರು, ಮತಾಂತರಗೊಂಡವರು ಮತ್ತು ಮುಸ್ಲಿಮರ ವಿರುದ್ಧ ತಾರತಮ್ಯ ಮುಂದುವರಿದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಬಡವರು ಮತ್ತು ಅವಕಾಶ ವಂಚಿತರ ಸಮಸ್ಯೆ ಬಗೆಹರಿಯುವುದಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಓಟಿಗಾಗಿ ಹಿಂದುತ್ವ ಕಾರ್ಡ್‌ ಬಳಸುತ್ತಿವೆ’ ಎಂದು ಬಿಎಸ್ಪಿ ವರಿಷ್ಠೆ ಆರೋಪಿಸಿದರು.

‘ಹಿಂದೂ ಧರ್ಮದ ಹೀನ ಆಚರಣೆಗಳನ್ನು ಕೈಬಿಡುವಂತೆ ಶಂಕರಾಚಾರ್ಯರು ಮತ್ತು ಬಿಜೆಪಿ-ಆರೆಸ್ಸೆಸ್‌ಗಳಿಗೆ ಸಾಕಷ್ಟು ಗಡುವು ನೀಡುತ್ತೇನೆ. ಅವರು ವಿಫಲರಾದರೆ ನಾನೂ ಅಂಬೇಡ್ಕರ್‌ ಹಾದಿ ತುಳಿಯುತ್ತೇನೆ’ ಎಂದು ಮಾಯಾವತಿ ಎಚ್ಚರಿಸಿದರು.

ಅಯ್ಯೋ ಮೊದ್ಲು ತೊಲಗಮ್ಮ ನಂದು ಒಂದು ನಮಸ್ಕಾರ ಸಿಗುತ್ತೆ ಒಂದು ನೆನಪಿಟ್ಕೋಳಮ್ಮ ಮಾಯಾವತಿ ನೀವು ಅಂಬೇಡ್ಕರ್ ಅಕ್ಕನೋ ತಂಗಿನೋ ಆಗೋಕೆ ಪ್ರಯತ್ನ ಮಾಡ್ಬೇಡಿ ಆ ಕಾಲ ಬೇರೆ ಈಗಿನ ಕಾಲ ಬೇರೆ ವೇಸ್ಟ್ ಆಗೋದು ಗ್ಯಾರೆಂಟಿ

ಬಿಜೆಪಿ-ಆರೆಸ್ಸೆಸ್‌ಗಳು ‘ಜಾತಿವಾದಿ, ಹಿಂದುತ್ವವಾದಿ ಮತ್ತು ಮೀಸಲು ವಿರೋಧಿ’ ಎಂದು ಅವರು ಆರೋಪಿಸಿದರು. ಕಳೆದ ಏಪ್ರಿಲ್‌-ಮೇ ನಲ್ಲಿ ನಡೆದ ಸಹಾರಣ್‌ಪುರ ಜಾತಿ ಗಲಭೆಯಲ್ಲಿ ತಮ್ಮ ಹತ್ಯೆಗೆ ಬಿಜೆಪಿ ಸಂಚು ಹೂಡಿತ್ತು ಎಂದು ಮಾಯಾವತಿ ಆರೋಪಿಸಿದರು.

Comments are closed.