ರಾಷ್ಟ್ರೀಯ

10 ರೂ.ಗೆ ಚಿಕಿತ್ಸೆ ನೀಡುವ ವೈದ್ಯ

Pinterest LinkedIn Tumblr


ತಿರುನಲ್ವೇಲಿ: ವೈದ್ಯ ವೃತ್ತಿ ಒಂದು ಸೇವೆಯೇ ಹೊರತು ವ್ಯವಹಾರವಲ್ಲ ಎಂಬ ಮಾತೊಂದಿದೆ. ಈ ಮಾತನ್ನು ಪಾಲಿಸುವ ವೈದ್ಯರು ತೀರಾ ವಿರಳ. ಆದರೆ ಇಲ್ಲೊಬ್ಬ ವೈದ್ಯ ಕೇವಲ 10 ರೂ. ಪಡೆದು ತಮ್ಮ ನಿಸ್ವಾರ್ಥ ಸೇವೆಯನ್ನು ನಡೆಸುತ್ತಿದ್ದಾರೆ.

ಹೌದು, ತಿರುನಲ್ವೇಲಿಯ ತೇಂಕಾಸಿ ಮೂಲದ ವೈದ್ಯ ರಾಮಸ್ವಾಮಿ ತಮ್ಮ ಕ್ಲಿನಿಕ್‌ನಲ್ಲಿ ಕೇವಲ 10 ರೂ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ಕುರಿತು ಮಾತನಾಡಿದ ರಾಮಸ್ವಾಮಿ ‘ ಮೊದಲಿಗೆ 2 ಅಥವಾ 3 ರೂ ಪಡೆಯುತ್ತಿದ್ದೆ ಆದರೆ ಇದೀಗ 10 ರೂ ಪಡೆಯುತ್ತಿದ್ದೇನೆ ಅಷ್ಟೆ’ ಎಂದು ನಗುತ್ತಲೇ ತಮ್ಮ ಸೇವೆಯ ಕುರಿತು ಹೇಳಿಕೊಂಡಿದ್ದಾರೆ.

ಕೋವಿಲ್‌ಪಟ್ಟಿಯಲ್ಲಿ ಜನಿಸಿದ ರಾಮಸ್ವಾಮಿ ಸರಕಾರಿ ಶಾಲೆಯಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿ ತಿರುನಲ್ವೇಲಿಯ ಮೆಡಿಕಲ್‌ ಕಾಲೇಜಿನಲ್ಲಿ ತಮ್ಮ ವೈದ್ಯ ಪದವಿ ಪಡೆದಿದ್ದಾರೆ.

ತಿರುನಲ್ವೇಲಿ ಮೆಡಿಕಲ್‌ ಕಾಲೇಜಿನ ಎರಡನೇ ಬ್ಯಾಚ್‌ ವಿದ್ಯಾರ್ಥಿಯಾಗಿರುವ ರಾಮಸ್ವಾಮಿ, ಶಿಕ್ಷಣ ಮತ್ತು ಆಸ್ಪತ್ರೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ‘ ಈ ಎರಡೂ ಕ್ಷೇತ್ರಗಳನ್ನು ಖಾಸಗೀಕಣಗೊಳಿಸಿದ ಪರಿಣಾಮ ಇದೀಗ ಎಲ್ಲವೂ ವ್ಯವಹಾರವೇ ಆಗಿ ಉಳಿದಿವೆ. ಸೇವೆಯನ್ನು ವ್ಯವಹಾರಕ್ಕೆ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಖಾಸಗಿ ಆಸ್ಪತ್ರೆಯಲ್ಲಿ ಬಡವರು ಮತ್ತು ಶ್ರೀಮಂತರಿಗೆ ಚಿಕಿತ್ಸೆಯಲ್ಲಿ ತಾರತಮ್ಯ ಮಾಡುತ್ತಾರೆ. ಇದರ ಬದಲಾವಣೆ ಅತ್ಯಗತ್ಯ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Comments are closed.