ರಾಷ್ಟ್ರೀಯ

ಬರಿ 999 ರೂ.ಗೆ ನಿಮ್ಮದಾಗಿಸಿ ಮೈಕ್ರೋಮ್ಯಾಕ್ಸ್ 4ಜಿ ಸ್ಮಾರ್ಟ್‌ಫೋನ್

Pinterest LinkedIn Tumblr


ಹೊಸದಿಲ್ಲಿ: ಇತ್ತೀಚೆಗಷ್ಟೇ ಭಾರತದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಮೈಕ್ರೋಮ್ಯಾಕ್ಸ್, ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಸಹಭಾಗಿತ್ವದಲ್ಲಿ 4ಜಿ ಸೌಲಭ್ಯವನ್ನೊಳಗೊಂಡ ‘ಭಾರತ್ 1’ ಫೋನ್ ಬರಿ 2,200 ರೂ.ಗಳಿಗೆ ಬಿಡುಗಡೆಗೊಳಿಸಿತ್ತು.

ಇದೀಗ ಮಗದೊಂದು ಹೆಜ್ಜೆಯನ್ನಿಟ್ಟಿರುವ ಮೈಕ್ರೋಮ್ಯಾಕ್ಸ್, ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ವೋಡಾಫೋನ್ ಜತೆ ಸೇರಿಕೊಂಡು ಕೇವಲ 999 ರೂ. ಮೌಲ್ಯಕ್ಕೆ ಮಗದೊಂದು 4ಜಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಅದುವೇ ‘ಭಾರತ್ 2 ಅಲ್ಟ್ರಾ’.

ಬರಿ 2,200 ರೂ.ಗೆ ಮೈಕ್ರೋಮ್ಯಾಕ್ಸ್ 4G ಫೋನ್ ಬಿಡುಗಡೆ

999 ರೂ.ಗೆ ಹೇಗೆ ಸಾಧ್ಯ?

ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತ್ 2 ಅಲ್ಟ್ರಾ 4ಜಿ ಸ್ಮಾರ್ಟ್‌ಫೋನ್‌ನ ನೈಜ ಬೆಲೆ 2,899 ರೂ.

ಗ್ರಾಹಕರಿಗೆ ಒಂದು ವರೆ (18 ತಿಂಗಳು) ವರ್ಷದ ಬಳಿಕ 900 ರೂ. ಕ್ಯಾಶ್‌ಬ್ಯಾಕ್ ಮತ್ತು ಆನಂತರದ ಒಂದು ವರೆ ವರ್ಷದ ಬಳಿಕ 1000 ರೂ. ಕ್ಯಾಶ್‌ಬ್ಯಾಕ್ ದೊರಕಲಿದೆ. ಈ ಕ್ಯಾಶ್ ಬ್ಯಾಕ್ ಮೊತ್ತವು ಬಳಕೆದಾರನ ವೋಡಾಫೋನ್ ಇ-ಪೇಸಾ ವಾಲೆಟ್‌ಗೆ ಜಮೆ ಆಗಲಿದೆ.

ಅಂದರೆ ನೈಜ 2899 ರೂ.ನಿಂದ 1900 ಕಡಿತಗೊಳಿಸಿದಾಗ ಮೊಬೈಲ್ ಮೌಲ್ಯ ಬರಿ 999 ರೂ.ಗಳಾಗುತ್ತದೆ.

ಆದರೆ ಇದಕ್ಕಾಗಿ ಗ್ರಾಹಕರು ಮೂರು ವರ್ಷಗಳ (36 ತಿಂಗಳು) ವರೆಗೆ ಮಾಸಿಕ 150 ರೂ.ಗಳ ರಿಚಾರ್ಚ್ ಮಾಡಿಸಬೇಕು. ಅಂದರೆ ಇಂಟರ್‌ನೆಟ್ ಡೇಟಾಗಾಗಿ 5,400 ರೂ. ಮೊತ್ತವನ್ನು ಗ್ರಾಹಕರು ತಮ್ಮ ಜೇಬಿನಿಂದಲೇ ನೀಡಬೇಕಾಗುತ್ತದೆ.

Comments are closed.