ರಾಷ್ಟ್ರೀಯ

ತಾಜ್’ಮಹಲ್’ನಲ್ಲಿ ‘ಶಿವ ಚಾಲೀಸಾ’ ಪಠಿಸಿದ ಹಿಂದು ಕಾರ್ಯಕರ್ತರ ಬಂಧನ

Pinterest LinkedIn Tumblr

ಆಗ್ರಾ: ವಿವಾದ ಕೇಂದ್ರ ಬಿಂದುವಾಗಿರುವ ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ವಿವಾದಕ್ಕೆ ಅಂತ್ಯ ಕಾಣುವ ಲಕ್ಷಣಗಳು ಕಂಡು ಬರುತ್ತಿಲ್ಲ.

2 ಹಿಂದೂ ಸಂಘಟನೆಗಳ ಕಾರ್ಯಕರ್ತ ಗುಂಪೊಂದು ತಾಜ್ ಮಹಲ್ ಆವರಣದಲ್ಲಿ ‘ಶಿವ ಚಾಲೀಸಾ’ ಪಠಿಸಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಘಟನೆ ಸೋಮವಾರ ನಡೆದಿದೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕರೊಬ್ಬರು ತಾಜ್ ಮಹಲ್ ಈ ಹಿಂದೆ ಶಿವಾಲಯವಾಗಿತ್ತೆಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಎರಡೂ ಹಿಂದೂ ಸಂಘಟನೆಗಳ ಕಾರ್ಯಕರ್ರ ಸಮೂಹ ತಾಜ್ ಮಹಲ್ ಆವರಣದಲ್ಲಿ ನಿನ್ನೆ ಶಿವ ಚಾಲೀಸಾ ಪಠಿಸಲು ಮುಂದಾಗಿದೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಹಿಂದು ಕಾರ್ಯಕರ್ತರನ್ನು ರಾಷ್ಟ್ರ ಸ್ವಾಭಿಮಾನ್ ದಳ (ಆರ್’ಎಸ್’ಡಿ) ಮತ್ತು ಹಿಂದು ಯುವ ವಾಹಿನಿ (ಹೆಚ್’ವೈವಿ)ಗೆ ಸೇರಿವರೆಂದು ಹೇಳಲಾಗುತ್ತಿದೆ. ಕಾರ್ಯಕರ್ತನ್ನು ವಶಕ್ಕೆ ತೆಗೆದುಕೊಂಡ ಸಿಐಎಸ್ಎಫ್ ಸಿಬ್ಬಂದಿಗಳು ನಂತರ ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬಂಧಿತ ಕಾರ್ಯಕರ್ತರು ಲಿಖಿತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಬಳಿಕವಷ್ಟೇ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Comments are closed.