ಕ್ರೀಡೆ

ಭಾರತೀಯ ತಂಡದಲ್ಲಿ ಮುಸ್ಲಿಂ ಆಟಗಾರರೇಕಿಲ್ಲ ಎಂಬ ಪ್ರಶ್ನೆಗೆ ಭಜ್ಜಿ ಕೊಟ್ಟ ಖಡಕ್ ಉತ್ತರವೇನು ಗೊತ್ತೇ..?

Pinterest LinkedIn Tumblr

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಂ ಆಟಗಾರರು ಏಕಿಲ್ಲ ಎಂದು ವಿವಾದಾತ್ಮಕವಾಗಿ ಪ್ರಶ್ನೆ ಮಾಡಿದ ವ್ಯಕ್ತಿಗೆ ಭಾರತ ತಂಡದ ಕ್ರಿಕೆಟಿಗ ಟರ್ಬೋನೇಟರ್ ಹರ್ಭಜನ್ ಸಿಂಗ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿ ಆತನ ಬಾಯಿ ಮುಚ್ಚಿಸಿದ್ದಾರೆ.

ಸಂಜೀವ್ ಭಟ್ ಎಂಬ ವ್ಯಕ್ತಿ ತನ್ನ ಟ್ವಿಟರ್ ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದು, ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರೇಕಿಲ್ಲ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೀಗೆ ಎಷ್ಟು ಬಾರಿ ಆಗಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅವರದೇ ಧಾಟಿಯಲ್ಲಿ ಖಡಕ್ ಉತ್ತರ ನೀಡಿರುವ ಹರ್ಭಜನ್ ಸಿಂಗ್, ಭಾರತ ರಾಷ್ಟ್ರದಲ್ಲಿ ಹಿಂದೂ, ಮುಸ್ಲಿಂ ಮತ್ತು ಸಿಖ್ ಧರ್ಮೀಯರು ಸಹೋದರರಂತೆ ಬಾಳುತ್ತಿದ್ದೇವೆ. ಕ್ರಿಕೆಟ್ ನಲ್ಲಿ ಆಡುತ್ತಿರುವ ಪ್ರತೀಯೊಬ್ಬ ಆಟಗಾರ ಕೂಡ ಭಾರತೀಯನಾಗಿದ್ದು, ಆತನ ಜಾತಿ, ಧರ್ಮ, ವರ್ಣದ ಬಗ್ಗೆ ಚರ್ಚೆಗಳಾಗಬಾರದು..ಭಾರತ ತಂಡದ ಪ್ರತೀಯೊಬ್ಬ ಆಟಗಾರರೂ ತನ್ನ ಸಾಮರ್ಥ್ಯದ ಮೇಲೆ ಆಯ್ಕೆಯಾಗಿರುವುದೇ ಹೊರತು ಜಾತಿ, ಧರ್ಮದಿಂದಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇನ್ನು ಪ್ರಮುಖ ವಿಚಾರವೆಂದರೆ ಪ್ರಸ್ತುತ ಟ್ವೀಟ್ ಮಾಡಿ ವಿವಾದಕ್ಕೀಡಾಗಿರುವ ಸಂಜೀವ್ ಭಟ್ ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡೇ ಇಂತಹ ಬೇಜಾವ್ದಾರಿ ಟ್ವೀಟ್ ಮಾಡಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಂತೆಯೇ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಗೊಳಿಸಲಾಗಿತ್ತು. ಈ ತಂಡದಲ್ಲಿ ಮಹಮದ್ ಸಿರಾಜ್ ಎಂಬ ಉದಯೋನ್ಮುಖ ಆಟಗಾರ ಕೂಡ ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

Comments are closed.