ರಾಷ್ಟ್ರೀಯ

ಹಾಡಹಗಲೇ ರಸ್ತೆ ಬದಿಯ ಫುಟ್ಬಾತ್ ಮೇಲೆ ಮಹಿಳೆ ಮೇಲೆ ಅತ್ಯಾಚಾರ ! ರಕ್ಷಿಸುವ ಬದಲು ವೀಡಿಯೊ ಮಾಡಿ ಪೊಲೀಸರಿಗೆ ಕಳುಹಿಸಿದ ಸಾರ್ವಜನಿಕರು

Pinterest LinkedIn Tumblr

ವಿಶಾಖಪಟ್ಟಿಣಂ: ಹಾಡಹಗಲೇ ರಸ್ತೆ ಬದಿಯ ಫುಟ್ಬಾತ್ ಮೇಲೆ ಮಹಿಳೆಯೊಬ್ಬಳನ್ನು ರೇಪ್ ಮಾಡಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದರೂ ಸಾರ್ವಜನಿಕರಾರೂ ಮಹಿಳೆಯ ರಕ್ಷಣೆಗೆ ಮುಂದಾಗಲಿಲ್ಲ. ಆಟೋಡ್ರೈವರ್’ವೊಬ್ಬ ಈ ಅತ್ಯಾಚಾರದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೊಲೀಸರಿಗೆ ಕಳುಹಿಸಿದ ಬಳಿಕ ಆರೋಪಿಯ ಬಂಧನವಾಗಿದೆ.

ನಗರದ ತಾಡಿಚೇಟ್ಲಪಲೆಂ ಸಮೀಪದ ನ್ಯೂ ರೈಲ್ವೆ ಕಾಲೋನಿಯ ಜನದಟ್ಟನೆಯ ರಸ್ತೆ ಬಳಿ ಈ ಹೇಯ ಕೃತ್ಯ ನಡೆದಿದೆ. 23 ವರ್ಷದ ಟ್ರಕ್ ಕ್ಲೀನರ್ ಗಂಜಿ ಶಿವ ಎಂಬುವನೇ ಅತ್ಯಾಚಾರ ಆರೋಪಿ. ಕುಡಿತದ ನಶೆಯಲ್ಲಿದ್ದ ಗಂಜಿ ಶಿವ ಫುಟ್ಬಾತ್ ಮೇಲೆ ಮರವೊಂದರ ಕೆಳಗೆ ಕುಳಿತಿದ್ದ 43 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗುತ್ತಾನೆ. ಜನರು ಪಕ್ಕದಲ್ಲೇ ಹಾದುಹೋದರೂ ಏನೂ ಆಗದವರಂತೆ ಹೋಗುತ್ತಾರೆ. ಕೆಲವರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೋಗುತ್ತಾರೆ. ಯಾರೂ ಕೂಡ ಅತ್ಯಾಚಾರಿಯನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಆಟೋಡ್ರೈವರ್ ಮಾತ್ರ ವಿಡಿಯೋ ಮಾಡಿ ಅದನ್ನು ಪೊಲೀಸರಿಗೆ ಕಳುಹಿಸುತ್ತಾನೆ. ಪೊಲೀಸರು ಬರುವಷ್ಟರಲ್ಲಿ ಅತ್ಯಾಚಾರಿಯು ತನ್ನ ಕೆಲಸ ಮುಗಿಸಿ ಬೈಕ್’ನಲ್ಲಿ ಪರಾರಿಯಾಗಿರುತ್ತಾನೆ. ರಿಕ್ಷಾ ಚಾಲಕ ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಆರೋಪಿ ಗಂಜಿ ಶಿವನನ್ನು ಅರೆಸ್ಟ್ ಮಾಡುತ್ತಾರೆ.

ಅತ್ಯಾಚಾರಕ್ಕೊಳಗಾದ 43 ವರ್ಷದ ಮಹಿಳೆಯು ಆ ದಿನ ಬಹಳ ನಿತ್ರಾಣ ಸ್ಥಿತಿಯಲ್ಲಿರುತ್ತಾಳೆ. ಕೌಟುಂಬಿಕ ಜಗಳದ ಕಾರಣ ಎರಡು ದಿನದ ಹಿಂದೆ ಮನೆಬಿಟ್ಟು ಓಡಿಬಂದಿದದ ಆ ಮಹಿಳೆ ಸರಿಯಾಗಿ ಊಟ ಮಾಡದೇ ಬಳಲಿಹೋಗಿರುತ್ತಾಳೆ. ಅತ್ಯಾಚಾರಿಯು ರೇಪ್ ಮಾಡುತ್ತಿದ್ದಾಗ ಅದನ್ನು ಪ್ರತಿರೋಧಿಸುವಷ್ಟೂ ಅಥವಾ ಕಿರುಚುವಷ್ಟೂ ಬಲ ಆಕೆಯಲ್ಲಿ ಉಳಿದಿರುವುದಿಲ್ಲ. ಮಹಿಳೆಯ ಈ ಅಸಹಾಯಕತೆಯನ್ನು ಆರೋಪಿ ಚೆನ್ನಾಗಿ ದುರುಪಯೋಗಿಸಿಕೊಳ್ಳುತ್ತಾನೆ.

ಸದ್ಯ, ಪೊಲೀಸರು ಗಂಜಿ ಶಿವನನ್ನು ಕೋರ್ಟ್’ಗೆ ಹಾಜರುಪಡಿಸಿದ್ದು, ಎರಡು ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

Comments are closed.