ರಾಷ್ಟ್ರೀಯ

ಮಹಿಳೆಯರ ಜಡೆಗೆ ಕತ್ತರಿ: ಕುಪ್ವಾರದಲ್ಲಿ ಯೋಧನ ಮೇಲೆ ಉದ್ರಿಕ್ತರಿಂದ ಮಾರಣಾಂತಿಕ ಹಲ್ಲೆ!

Pinterest LinkedIn Tumblr


ಕುಪ್ವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರ ಜಡೆಗಳಿಗೆ ಕತ್ತರಿ ಹಾಕಲಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು ಇದರಿಂದ ರೊಚ್ಚಿಗೆದ್ದಿರುವ ಸ್ಥಳೀಯರು ಶಂಕೆಯಿಂದ ಸಿಕ್ಕ ಸಿಕ್ಕವರನ್ನು ಥಳಿಸುತ್ತಿದ್ದಾರೆ.
ಈ ಮಧ್ಯೆ ಬಿಎಸ್ಎಫ್ ಯೋಧನೊಬ್ಬನ ಮೇಲೆ ಉದ್ರಿಕ್ತ ಸ್ಥಳೀಯರು ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದು ಯೋಧನನ್ನು ಸಹ ಯೋಧರು ರಕ್ಷಿಸಿದ್ದಾರೆ. ಆದರೆ ತೀವ್ರವಾಗಿ ಥಳಿತಕ್ಕೊಳಗಾಗಿರುವ ಯೋಧನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯಿಂದಾಗಿ ಕುಪ್ವಾರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಯೋಧರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕುಲಗಂ ಜಿಲ್ಲೆಯಲ್ಲಿ ನಿಗೂಢವಾಗಿ ಮಹಿಳೆಯರ ಜಡೆ ಕತ್ತರಿಸುತ್ತಿರುವ ಪ್ರಕರಣಗಳನ್ನು ವಿರೋಧಿಸಿ ಸ್ಥಳೀಯರು ಈ ಹಿಂದೆ ಬಂದ್ ಸಹ ಆಚರಿಸಿದ್ದರು.

Comments are closed.