ರಾಷ್ಟ್ರೀಯ

ಆಧಾರ್ ಬಗ್ಗೆ ಸರ್ಕಾರಕ್ಕೆ ಸುಪ್ರೀಂ ತರಾಟೆ

Pinterest LinkedIn Tumblr


ನವದೆಹಲಿ(ಫೆ.14): ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ
ಕೇಂದ್ರ ಸರ್ಕಾರವು ಆಧಾರ್ ಮಸೂದೆಯನ್ನು ಸಂಸತ್ತಿನಲ್ಲಿ ಹಣಕಾಸು ಮಸೂದೆ ಎಂದು ಮಂಡಿಸಿ ಅದಕ್ಕೆ ಅನುಮೋದನೆ ಪಡೆದಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಸುಪ್ರೀಂ ಮೆಟ್ಟಿಲೇರಿದ್ದರು.
ಸಂಸತ್ತಿನ ಕಲಾಪಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತಿಲ್ಲ, ಇಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮವೆಂದು ಸರ್ಕಾರ ಪರ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಆಕ್ಷೇಪಿಸಿದರು.
ಆದರೆ ಸರ್ಕಾರದ ವಾದಕ್ಕೆ ತಿರುಗೇಟು ನೀಡಿದ ಮು. ನ್ಯಾ. ಜೆ. ಎಸ್. ಖೆಹರ್, ಸ್ಪೀಕರ್ ನೀಲಿ ಬಣ್ಣವನ್ನು ಹಸಿರೆಂದು ಹೇಳಿದರೆ, ನಾವು ನೀಲಿ ಬಣ್ಣವನ್ನು ನೀಲಿಯೆಂದೂ, ಅದು ಹಸಿರಲ್ಲವೆಂದು ಅವರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಆಧಾರನ್ನು ಸಬ್ಸಿಡಿ ಯೋಜನೆಗಳಿಗೆ ಜೋಡಿಸುವ ಮೂಲಕ ಸರ್ಕಾರವು 30 – 50 ರಿಂದ ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ರೊಹ್ಟಗಿ ವಾದಿಸಿದಾಗ, ನಿಮ್ಮ ಉದ್ದೇಶವು ಒಳ್ಳೆಯದಿರಬಹುದು, ಆದರೆ ಅದು ಹಣಕಾಸು ಮಸೂದೆಯೋ, ಅಲ್ಲವೋ ಎಂಬುವುದೇ ನಮ್ಮ ಮುಂದಿರುವ ಪ್ರಶ್ನೆಯೆಂದು ನ್ಯಾ. ಖೆಹರ್ ಹೇಳಿದ್ದಾರೆ.

Comments are closed.