ರಾಷ್ಟ್ರೀಯ

ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಅರೆಬೆತ್ತಲುಗೊಳಿಸಿದ ಶಿಕ್ಷಕಿ!

Pinterest LinkedIn Tumblr
SSLC

ಸೋನ್ ಭದ್ರಾ: ಹೋಮ್ ವರ್ಕ್ ಮಾಡಲಿಲ್ಲ ಎಂದು ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಶಿಕ್ಷಕಿಯೇ ಅರೆಬೆತ್ತಲುಗೊಳಿಸಿ ಪರೇಡ್ ನಡೆಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೋನ್ ಭದ್ರಾದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಸೋನ್ ಭದ್ರಾ ಪ್ರದೇಶದಲ್ಲಿರುವ ಹುಡುಗಿಯರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಮೀನಾ ಸಿಂಗ್ ಅವರು ವಿದ್ಯಾರ್ಥಿನಿಯರನ್ನು ಅರೆ ಬೆತ್ತಲುಗೊಳಿಸಿ ಶಾಲಾ ಕಾಪೌಂಡ್ ನಲ್ಲಿ ಪರೇಡ್ ನಡೆಸಿದ್ದು, ಈ ವೇಳೆ ಅದರ ವಿಡಿಯೋ ಮತ್ತು ಫೋಟೋ ತೆಗೆದಿದ್ದಾರೆ. ಅಲ್ಲದೆ ನಾಳೆಯೂ ಹೋಮ್ ವರ್ಕ್ ಮಾಡದಿದ್ದರೆ ಈ ವಿಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ವಿದ್ಯಾರ್ಥಿನಿಯರನ್ನು ಅರೆ ಬೆತ್ತಲುಗೊಳಿಸಿ ಮುಖ್ಯ ಶಿಕ್ಷಕಿ ಕ್ರೌರ್ಯ ಮೆರೆದಿದ್ದು, ಈ ಬಗ್ಗೆ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾರ್ಥಿನಿಯರು ಈ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೋಷಕರು ಮುಖ್ಯಶಿಕ್ಷಕಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಶಾಲೆಯ ಮುಖ್ಯ ಶಿಕ್ಷಕಿ ಮೀನಾ ಸಿಂಗ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ಇಲಾಖೆವತಿಯಿಂದ ತನಿಖೆಗೆ ಆದೇಶಿಸಿದ್ದಾರೆ.

Comments are closed.